ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಆಟೋ ಮಿನಿಮಮ್ ಚಾರ್ಜ್ 25ರಿಂದ 30ರೂ.ಗೆ ಏರಿಕೆ

ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದ್ದು, ಕನಿಷ್ಠ ದರವನ್ನು 25 ರೂಪಾಯಿಂದ 30 ರೂ.ಗೆ ಏರಿಕೆ ಮಾಡಲಾಗಿದೆ.

By

Published : Nov 8, 2021, 3:18 PM IST

auto travel charges increased in bengaluru
ಆಟೋ ಪ್ರಯಾಣ ದರ ಹೆಚ್ಚಳ ಮಾಡಿ ಆದೇಶ

ಬೆಂಗಳೂರು: ಎಂಟು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಪರಿಷ್ಕರಿಸಿ ಹೊಸ ಆದೇಶ ಹೊರಡಿಸಿದ್ದು, ಕನಿಷ್ಠ ದರವನ್ನು 25 ರೂಪಾಯಿಂದ 30 ರೂ.ಗೆ ಏರಿಕೆ ಮಾಡಲಾಗಿದೆ.


ಪ್ರಸುತ್ತ ಹೊಸ ದರ ಡಿಸೆಂಬರ್ 1 ರಿಂದ ಅನ್ವಯವಾಗಲಿದೆ. ಕನಿಷ್ಠ ದರ ಹಾಗೂ ಪ್ರತಿ ಕಿಮೀ ದರವನ್ನು ಹೆಚ್ಚಳ ಮಾಡಲಾಗಿದೆ. ಕನಿಷ್ಠ ದರ 25 ರಿಂದ 30ರೂಪಾಯಿಗೆ ಏರಿಕೆಯಾಗಿದೆ. ಈ‌ ಮೊದಲು 1.8 ಕಿ.ಮೀ.ಗೆ 25 ರೂ ಇತ್ತು. ಮಿನಿಮಮ್ ನಂತರದ ಪ್ರತಿ ಕಿ.ಮೀ ಗೆ 12 ರೂ ಇದ್ದ ದರ 15 ರುಪಾಯಿ ಏರಿಕೆಯಾಗಿದೆ.


ಆಟೋ ಚಾಲಕರ ಮನವಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಇಲಾಖೆ ಮಣಿದು ದರ ಹೆಚ್ಚಳ ಮಾಡಿದೆ. ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಈಗಾಗಲೇ ಆಟೋ ಯೂನಿಯನ್ ಜೊತೆಗೆ ಸಭೆ ನಡೆಸಿದ್ದರು. ಬೆಂಗಳೂರು ನಗರದಲ್ಲಿ ಒಂದು ಕಿ.ಮೀ. ಗೆ 13 ರೂಪಾಯಿ, ಮಿನಿಮಮ್ ಚಾರ್ಜ್ 25 ರೂಪಾಯಿ ನಿಗದಿಯಾಗಿತ್ತು. ಸಂಘಟನೆಗಳು ಕಿ.ಮೀ. ಗೆ 15 ರಿಂದ 16 ರೂ. ಹಾಗೂ ಮಿನಿಮಮ್ 30ರೂ. ಮಾಡುವಂತೆ ಪಟ್ಟು ಹಿಡಿದಿದ್ದರು. ಸದ್ಯ, ಜಿಲ್ಲಾಧಿಕಾರಿ ಇದಕ್ಕೆ ಸಮ್ಮತಿಸಿ ಪ್ರಯಾಣ ದರ ಏರಿಕೆ ಮಾಡಿದ್ದಾರೆ.

2013ರಲ್ಲಿ ಆಟೋ ಮೀಟರ್ ದರ ಹೆಚ್ಚಳ:

2013ರಲ್ಲಿ ಕೊನೆಯದಾಗಿ ಆಟೋ ಮೀಟರ್ ದರ ಹೆಚ್ಚಳವಾಗಿತ್ತು. ಸದ್ಯ ಆಟೋ ಗ್ಯಾಸ್ ದರ 57. 88 ಪೈಸೆಗೆ ಏರಿಕೆಯಾಗಿದೆ. ಹೀಗಾಗಿ ಮೀಟರ್ ಹಾಕಿ ಬಾಡಿಗೆ ಓಡಿಸೋದು ಕಷ್ಟ ಆಗ್ತಿದೆ. ಈ ಕಾರಣದಿಂದ ದರ ಏರಿಕೆ ಅನಿವಾರ್ಯ ಎಂದು ಆಟೋ ಯೂನಿಯನ್​ಗಳು ಪಟ್ಟು ಹಿಡಿದಿದ್ದವು.

ಇದನ್ನೂ ಓದಿ:ಇಂದಿನಿಂದ ಎರಡನೇ ಹಂತದ ಜನತಾ ಸಂಗಮ ಕಾರ್ಯಾಗಾರ: ಜೆಡಿಎಸ್ ಕಚೇರಿ ಸಿದ್ಧ

ABOUT THE AUTHOR

...view details