ಕರ್ನಾಟಕ

karnataka

ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ: ಯಾರಿಗೆಲ್ಲಾ ಅಧ್ಯಕ್ಷ ಸ್ಥಾನ.. ಇಲ್ಲಿದೆ ಡೀಟೇಲ್ಸ್​​!

By

Published : Dec 27, 2021, 10:38 PM IST

2021-22ನೇ ಸಾಲಿನ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ ಮಾಡಲಾಗಿದೆ. 9 ಜಂಟಿ ಸಮಿತಿಗಳು ಹಾಗೂ 6 ವಿಧಾನಸಭೆಯ ಸಮಿತಿಗಳನ್ನು ರಚಿಸಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ.

ಸರ್ಕಾರ
ಸರ್ಕಾರ

ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಗಿದ ಬೆನ್ನಲ್ಲೇ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ ಮಾಡಲಾಗಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಧ್ಯಕ್ಷತೆಯಲ್ಲಿ ಹಕ್ಕುಬಾಧ್ಯತೆಗಳ ಸಮಿತಿ ಸೇರಿ ಹಲವು ಸಮಿತಿಗಳನ್ನು ರಚಿಸಲಾಗಿದೆ.

2021-22ನೇ ಸಾಲಿನ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ ಮಾಡಲಾಗಿದೆ. 9 ಜಂಟಿ ಸಮಿತಿಗಳು ಹಾಗೂ 6 ವಿಧಾನಸಭೆಯ ಸಮಿತಿಗಳನ್ನು ರಚಿಸಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ.

ಜಂಟಿ ಸಮಿತಿಗಳು:

ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ರಮೇಶ್ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರಾಗಿದ್ದಾರೆ.

ಶಾಸಕ ಜಿಎಚ್ ತಿಪ್ಪಾರೆಡ್ಡಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಉದ್ಯಮಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ರವಿ ಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ಅಧೀನ ಶಾಸನ ರಚನಾ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಸಾರಾ ಮಹೇಶ್ ಅಧ್ಯಕ್ಷತೆಯಲ್ಲಿ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕಿ ಕೆ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಗ್ರಂಥಾಲಯ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 5 ಸದಸ್ಯರು ಮತ್ತು ವಿಧಾನಪರಿಷತ್ತಿನ 3 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಜಿ ಸೋಮಶೇಖರ ರೆಡ್ಡಿ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರು ಮತ್ತು ವಿಧಾನಪರಿಷತ್ತಿನ 5 ಸದಸ್ಯರು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ವಿಧಾನಸಭೆಯ ಸಮಿತಿಗಳು :

ಶಾಸಕ ಅಭಯ್ ಪಾಟೀಲ್ ಅಧ್ಯಕ್ಷತೆಯಲ್ಲಿ ಅಂದಾಜುಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸರ್ಕಾರಿ ಭರವಸೆಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 15 ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಧ್ಯಕ್ಷತೆಯಲ್ಲಿ ಹಕ್ಕು ಬಾಧ್ಯತೆಗಳ ಸಮಿತಿ ರಚಿಸಲಾಗಿದ್ದು, ವಿಧಾನಸಭೆಯ 11 ಸದಸ್ಯರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಉಪಸಭಾಧ್ಯಕ್ಷ ಚಂದ್ರಶೇಖರ ಮಾಮನಿ ಅಧ್ಯಕ್ಷತೆಯಲ್ಲಿ 11 ಸದಸ್ಯರ ಖಾಸಗಿ ಸದಸ್ಯರುಗಳ ವಿಧೇಯಕ ನಿರ್ಣಯಗಳ ಸಮಿತಿ, 16 ಸದಸ್ಯರ ಅರ್ಜಿಗಳ ಸಮಿತಿ, ಹಾಗೂ 13 ಸದಸ್ಯರ ವಸತಿ ಸೌಕರ್ಯ ಸಮಿತಿಯನ್ನು ರಚಿಸಲಾಗಿದೆ.

For All Latest Updates

TAGGED:

ABOUT THE AUTHOR

...view details