ಕರ್ನಾಟಕ

karnataka

ETV Bharat / state

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನಿರಾಸೆಯಾಗಿದೆ: ಶಾಸಕ ಅಂಗಾರ - ಸಚಿವ ಸಂಪುಟ

ಈ ಬಾರಿಯ ಸಚಿವ ಸಂಪುಟದ ಪ್ರಮುಖ ಆಕಾಂಕ್ಷಿ, ಬಿಜೆಪಿಯ ಹಿರಿಯ ಶಾಸಕ ಎಸ್. ಅಂಗಾರ ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿದ್ದು, ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನಿರಾಸೆಯಾಗಿದೆ. ಆದರೂ ಯಾವ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಯಂತಹ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಪಕ್ಷ ವಿರೋಧಿ ಚಟುವಟಿಕೆ ನಡೆಸಲ್ಲ: ಅಂಗಾರ ಅಸಮಾಧಾನ

By

Published : Aug 20, 2019, 4:36 PM IST

ಬೆಂಗಳೂರು: ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನಿರಾಸೆಯಾಗಿದೆ. ಯಾದರೂ ಯಾವ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಯಂತಹ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಶಾಸಕ ಎಸ್. ಅಂಗಾರ ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಪಕ್ಷ ವಿರೋಧಿ ಚಟುವಟಿಕೆ ನಡೆಸಲ್ಲ: ಅಂಗಾರ ಅಸಮಾಧಾನ
ಈಟಿವಿ ಭಾರತ್ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಯಾಕೆ ನನ್ನ ಹೆಸರು ಕೈಬಿಡಲಾಯಿತು ಎಂಬುದು ಗೊತ್ತಿಲ್ಲ. ಆರು ಬಾರಿ‌ ಶಾಸಕನಾಗಿದ್ದೇನೆ, ಇದರಿಂದ ಸಹಜವಾಗಿ ಬೇಸರವಾಗಿದೆ. ನನ್ನ ಕ್ಷೇತ್ರಕ್ಕೆ ಅನ್ಯಾಯವಾಗಿದ್ದು, ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವರಿಷ್ಠರು ಗಮನಿಸಬೇಕು ಎಂದಿದ್ದಾರೆ.

ABOUT THE AUTHOR

...view details