ಕರ್ನಾಟಕ

karnataka

ETV Bharat / state

ದಾಖಲೆ ಇಲ್ಲದ ಮನೆಗೂ ಪರಿಹಾರ ನೀಡಲು ಸಿಎಂ ಸಮ್ಮತಿ: ಅನಂತ್ ಕುಮಾರ್ ಹೆಗಡೆ - ಕದ್ರಾ ಡ್ಯಾಮ್

ಉತ್ತರ ಕನ್ನಡ ಜಿಲ್ಲೆಯ ಸಂಸತ್ ಸದಸ್ಯ ಅನಂತಕುಮಾರ ಹೆಗಡೆ ಹಾಗೂ ಶಾಸಕರುಗಳ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ನೆರೆ ಹಾವಳಿ ಮತ್ತು ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

By

Published : Sep 9, 2019, 3:31 PM IST

ಬೆಂಗಳೂರು: ನೆರೆಯಿಂದಾಗಿ ಕೊಚ್ಚಿ ಹೋದ ಮನೆಯ ದಾಖಲೆ ಬೇಕಿಲ್ಲ ಮನೆ ಇತ್ತು ಎನ್ನುವ ಕುರುಹು ಇದ್ದರೂ ಅಂತವರಿಗೂ ಪರಿಹಾರ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿ ನೀಡಿದ್ದಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಂಸತ್ ಸದಸ್ಯ ಅನಂತಕುಮಾರ ಹೆಗಡೆ ಹಾಗೂ ಶಾಸಕರುಗಳ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ನೆರೆ ಹಾವಳಿ ಮತ್ತು ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಗಡೆ, ಕರ್ನಾಟಕದಲ್ಲಿ ನೆರೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಇದರ ಬಗ್ಗೆ ಸಿಎಂ ಧನಾತ್ಮಕ ಚರ್ಚೆ ಮಾಡಿದ್ದಾರೆ. ನೆರೆಯಿಂದ ಕೊಚ್ಚಿ ಹೋದ ಮನೆಗಳಿಗೆ ಹಾಗೂ ದಾಖಲೆಯಿಲ್ಲದಂತಹ ಮನೆ ಇದ್ದರೂ ಮನೆ ಕಟ್ಟಿಕೊಡಲು ಆದೇಶ ನೀಡಿದ್ದಾರೆ ಎಂದರು.

ನದಿ ದಂಡೆಯಲ್ಲಿ ಇರುವ ರೈತರಿಗೆ 1+1 ಮನೆಗಳನ್ನ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಇದು ಸಫಲ ಆದರೆ, ರಾಜ್ಯದ ವಿವಿಧ ಭಾಗಗಳಲ್ಲಿ ಈ ರೀತಿಯಾಗಿ ಮಾಡುವ ಚಿಂತನೆ ನಡೆಸುತ್ತೇವೆ ಎಂದರು. ಭೂ ಪರಿವರ್ತನೆ ಸರಳೀಕರಣ ಮಾಡುವ ಕುರಿತು ಸಿಎಂ ಆದೇಶ ಮಾಡಿದ್ದಾರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲವೊಂದು ಕಡೆ ಚುನಾವಣೆ ಆಗಿಲ್ಲ ಕೆಲವೊಂದು ಕೋರ್ಟ್ ನಲ್ಲಿ ಇದೆ‌. ಕೋರ್ಟ್ ನಲ್ಲಿ ಇರುವ ಸ್ಥಳಿಯ ಸಂಸ್ಥೆಯ ಬಿಟ್ಟು ಸುಮಾರು 80ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಆಗಿಲ್ಲ ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.

ಉತ್ತರ ಕರ್ನಾಟಕ ಭಾಗದ ಕದ್ರಾ ಡ್ಯಾಮ್ ನಿಂದ ನೀರು ಬಿಟ್ಟಾಗ ಅಲ್ಲಿನ ಸಂತ್ರಸ್ತಕರಿಗೆ ಪರಿಹಾರ ಕೊಡೋಕೆ ಆಗಿಲ್ಲ. ಸುಮಾರು 10ಸಾವಿರ ರೂ ಕೂಡಲೇ ಕೊಡಲು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸುಮಾರು ವರ್ಷದಿಂದ ಹಾಲಕ್ಕಿ ಒಕ್ಕಲಿಗರ ಸಿಎಂ ಬೇಡಿಕೆ ಇಟ್ಟಿದ್ದರು ಒಂದು ಕೋಟಿ ರೂ ಅನುದಾನ ಅವರಿಗೆ ನೀಡಲು ಸಿಎಂ ಸ್ಪಂದಿಸಿದ್ದಾರೆ ಅದಕ್ಕಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ನೆರೆ ಪರಿಹಾರ ವಿಳಂಬವಾಗ್ತಾ ಇದೆ ಅನ್ನುವ ಪ್ರತಿಪಕ್ಷದವರ ಆರೋಪಕ್ಕೆ ನಾವು ಪ್ರತಿಕ್ರಿಯಿಸೋದಿಲ್ಲ. ನೆರೆ ಆದ ಜಾಗದ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಂಪೂರ್ಣ ಮಾಹಿತಿ ನೀಡಬೇಕು. ಈಗಾಗಲೇ ಕೇಂದ್ರ ‌ಸರ್ಕಾರಕ್ಕೆ ರಾಜ್ಯ ಸರ್ಕಾರ ಆ ಮಾಹಿತಿ ‌ನೀಡಿದೆ ಖಂಡಿತವಾಗಿ ಕೇಂದ್ರ ಸರ್ಕಾರ ಯಾವತ್ತೂ ಯಾರೂ ಕೊಡದಷ್ಟು ಅನುದಾನ ಕೊಡುತ್ತದೆ. ರಾಜ್ಯ ಸರ್ಕಾರ ಎಲ್ಲ ಮಾಹಿತಿ ಕಲೆ ಹಾಕಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ, ಕೇಂದ್ರ ಸರ್ಕಾರ ಪಾಸಿಟಿವ್ ಆಗಿ ಸ್ಪಂದಿಸುತ್ತದೆ ಅನ್ನೋ ನಂಬಿಕೆ ಇದೆ ಎಂದರು.

ಜಿಲ್ಲಾಧಿಕಾರಿ ಸ್ಥಾನಕ್ಕೆ ಶಶಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರ ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಹೇಳಬೇಕಿರುವುದನ್ನೆಲ್ಲಾ ಹೇಳಿದ್ದೇನೆ, ಕೇಂದ್ರ ಸರ್ಕಾರದ ಕೇಡರ್ ನಲ್ಲಿ ಬರುವಂತಹ ಅಧಿಕಾರಿ ಕೇಂದ್ರ ಸರ್ಕಾರ ಮತ್ತು ಅದರ ಕಾರ್ಯಾಲಯ ಸರಿಯಾದ ಕ್ರಮ ಕೈಗೊಳ್ಳುತ್ತೆ. ಸಾಂವಿಧಾನಿಕವಾಗಿ ತೆಗೆದುಕೊಂಡಿರುವ ತೀರ್ಮಾನಕ್ಕೆ ಇದು ಅಪಚಾರ ಮಾಡಿದ ಹಾಗೆ ಎಂದು ಸೆಂಥಿಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details