ಕರ್ನಾಟಕ

karnataka

ETV Bharat / state

ಕೆಲವೇ ದಿನಗಳಲ್ಲಿ ಮೈತ್ರಿ ಸರ್ಕಾರದ ಬಾಂಡ್‌ ಸಿನಿಮಾ ರಿಲೀಸ್‌- ಮಾಜಿ ಡಿಸಿಎಂ ಆರ್‌.ಅಶೋಕ್ ಭವಿಷ್ಯ - kannada news paper

ಕೆಲವೇ ದಿನಗಳಲ್ಲಿ ಮೈತ್ರಿ ಸರ್ಕಾರದ ಜೇಮ್ಸ್ ಬಾಂಡ್ ಸಿನೆಮಾ ಬಿಡುಗಡೆ ಆಗುತ್ತದೆ ಕಾದು ನೋಡಿ ಎಂದು ಮಾಜಿ ಡಿಸಿಎಂ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಮಾಜಿ ಡಿಸಿಎಂ ಆರ್.ಅಶೋಕ್

By

Published : Apr 29, 2019, 7:54 PM IST

ಬೆಂಗಳೂರು : ಒಂದು ಕಡೆ ಜಾರಕಿಹೊಳಿ ಸಹೋದರರ ಜಗಳ, ಇನ್ನೊಂದು ಕಡೆ ಬಳ್ಳಾರಿ ಶಾಸಕರ ಗಲಾಟೆ. ಇದರ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಶಾಸಕರ ಗುಂಪುಗಾರಿಕೆ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮೈತ್ರಿ ಸರ್ಕಾರದ ಜೇಮ್ಸ್ ಬಾಂಡ್ ಸಿನೆಮಾ ಬಿಡುಗಡೆ ಆಗುತ್ತದೆ. ಕಾದು ನೋಡಿ ಎಂದು ಮೈತ್ರಿ ಸರ್ಕಾರದ ಅಸ್ಥಿರತೆಯನ್ನು ಮಾಜಿ ಡಿಸಿಎಂ ಆರ್.ಅಶೋಕ್ ವ್ಯಂಗ್ಯ ಭರಿತವಾಗಿ ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಕೆ ಮಾಡಿತ್ತು. ಚುನಾವಣಾ ಕಚೇರಿಗೆ ಭೇಟಿ ನೀಡಿದ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ನವ ಬೆಂಗಳೂರು ನಿರ್ಮಾಣ ಯೋಜನೆ ಕಾಮಗಾರಿಗಳನ್ನು ಆರಂಭಿಸಲು ಅನುಮತಿ ನೀಡುವ ಮೂಲಕ ಸರ್ಕಾರ ನೀತಿ ಸಂಹಿತೆ ಉಲ್ಲಂಘಿಸುತ್ತಿದೆ, ಇದಕ್ಕೆ ಅನುಮತಿ ನೀಡಬಾರದು ಎಂದು ಮುಖ್ಯ ಚುನವಣಾಧಿಕಾರಿ ಸಂಜೀವ್ ಕುಮಾರ್‌ಗೆ ದೂರ ಸಲ್ಲಿಸಿತು.

ಮಾಜಿ ಡಿಸಿಎಂ ಆರ್.ಅಶೋಕ್

ನಂತರ ಮಾತನಾಡಿದ ಅಶೋಕ್, ಮುಖ್ಯಮಂತ್ರಿಗಳು ನವ ಬೆಂಗಳೂರು ಯೋಜನೆಯಡಿ ಪ್ರಾರಂಭಿಸಬೇಕಾದ ಕಾಮಗಾರಿಗಳಿಗೆ ತಡೆ ಹಿಡಿಯಬೇಕು ಎಂದು ಮನವಿ ಮಾಡಿದ್ದೇವೆ. ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ತರಾತುರಿಯಲ್ಲಿ ಇಷ್ಟು ಬೃಹತ್ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡುವ ಅವಶ್ಯಕತೆ ಏನಿದೆ? ಈ ಬಗ್ಗೆ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಳೆ ಬರುವ ಹಿನ್ನಲೆ ಕೆಲವು ತುರ್ತು ಕಾಮಗಾರಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದ ಯಾವುದಕ್ಕೂ ಅನುಮತಿ ಪಡೆದಿಲ್ಲ.

4261ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೆಆರ್‌ಡಿಎಲ್ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ. ಟೆಂಡರ್ ಇಲ್ಲದೇ ಕಾಮಗಾರಿ ನಡೆಸಲು ಪ್ರಾರಂಭಿಸಲು ಮುಂದಾಗಿದ್ದಾರೆ. ಇದನ್ನೆಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಚುನಾವಣಾಧಿಕಾರಿಗಳು ಹೇಳಿದ್ದಾರೆ ಎಂದರು.

ಸಿಎಂ ಬರಗಾಲದಲ್ಲೂ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದಾರೆ. ಬರ ಇರೋದು ಜನರಿಗೆ, ಅದೇ ರೀತಿ ಈಗ ಕಾಂಗ್ರೆಸ್‌ಗೂ ಬರ ಬಂದಿದೆ. ಅವರ ಫೈಲ್‌ಗಳೂ ಮೂವ್ ಆಗ್ತಿಲ್ಲ. ಲೋಕಸಭಾ ಚುನಾವಣೆ ತನಕ ಸುಮ್ಮನಿರಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿತ್ತು. ಈಗ ಚುನಾವಣೆ ಮುಕ್ತಾಯ ಆಗಿದೆ. ಹೀಗಾಗಿ ಕಾಂಗ್ರೆಸ್ ಆಟ ಶುರು ಮಾಡಿದೆ. ಅವರವರ ಕಚ್ಚಾಟದಿಂದಲೇ ಸರ್ಕಾರ ಬಿದ್ದು ಹೋಗಲಿದೆ. ಈಗ ಮೈತ್ರಿ ಸರ್ಕಾರದ ಜೇಮ್ಸ್ ಬಾಂಡ್ ಸಿನಿಮಾ 007 ಶುರು ಆಗಿದೆ. ನಿರ್ದೇಶಕರು ಅವರೇ, ಆ್ಯಕ್ಟರ್ ಕೂಡ ಅವರೇ, ನಮಗೆ ನಟನೆ ಮಾಡಲು ಅಲ್ಲಿ ಅವಕಾಶ ಇಲ್ಲ ಎಂದು ಮೈತ್ರಿ ಸರ್ಕಾರದ ಕಚ್ಚಾಟವನ್ನು ವ್ಯಂಗ್ಯವಾಗಿ ಬಣ್ಣಿಸಿದರು.

ಹಿಟ್ಲರ್ ಸಂಸ್ಕೃತಿ ಕಾಂಗ್ರೆಸ್‌ನದ್ದು, ಕಳೆದ ಮೂರು ಚುನಾವಣೆಗಳಲ್ಲಿ ವೋಟ್ ಹಾಕದ ರಮ್ಯಾ ಯಾವ ಸಂಸ್ಕೃತಿಯ ವಕ್ತಾರರು ಅಂತಾ ಹೇಳಬೇಕು. ಮೊದಲು ನೀವು ನಿಮ್ಮನ್ನು ಸರಿಮಾಡಿಕೊಳ್ಳಿ, ಇಲ್ಲವಾದರೆ ನಿಮ್ಮ ಕಾಂಗ್ರೆಸ್ಸಿಗರೇ ನಿಮ್ಮನ್ನು ಪಕ್ಷದಿಂದ ಹೊರಹಾಕುತ್ತಾರೆ ಎಂದು ರಮ್ಯಾ ಟ್ವಿಟರ್‌ಗೆ ಅಶೋಕ್ ತಿರುಗೇಟು ನೀಡಿದರು.

ABOUT THE AUTHOR

...view details