ಕರ್ನಾಟಕ

karnataka

ETV Bharat / state

ನಟಿ ಸಂಜನಾ ಅರೆಸ್ಟ್... ಗಲ್ರಾನಿ​ಯನ್ನು ಮೆಡಿಕಲ್​ ಟೆಸ್ಟ್​ಗೆ ಕರೆದೊಯ್ದ ಅಧಿಕಾರಿಗಳು - ನಟಿ ಸಂಜನಾ ಅರೆಸ್ಟ್

ಬೆಳಗ್ಗೆ ಸಂಜನಾ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಂತರ ವಶಕ್ಕೆ ಪಡೆದಿದ್ದರು. ಇದಾದ ನಂತರ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಸಂಜನಾರನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ಕೆ.ಸಿ. ಜನರಲ್​ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Sanjana arrest
ಮೆಡಿಕಲ್​ ಟೆಸ್ಟ್​ಗೆ ಕರೆದೊಯ್ದ ಅಧಿಕಾರಿಗಳು

By

Published : Sep 8, 2020, 3:17 PM IST

Updated : Sep 8, 2020, 3:33 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಭಾಷಾ ನಟಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಕಚೇರಿಯಲ್ಲಿ ಸತತವಾಗಿ ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸಂಜನಾ ಅವರನ್ನು ಬಂಧಿಸಿದ್ದಾರೆ. ​ಬೆಳಗ್ಗೆ ಸಂಜನಾ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಂತರ ವಶಕ್ಕೆ ಪಡೆದಿದ್ದರು. ಇದಾದ ನಂತರ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಸಂಜನಾಳನ್ನು ಮೆಡಿಕಲ್​ ಟೆಸ್ಟ್​ಗೆ ಕರೆದೊಯ್ಯುತ್ತಿರುವ ಸಿಸಿಬಿ ಅಧಿಕಾರಿಗಳು

ವಿಚಾರಣೆಯಲ್ಲಿ ಸಂಜನಾ ಅವರು ಶಾಸಕರೊಬ್ಬರ ಪುತ್ರ, ತಮ್ಮ ಸಮಕಾಲೀನರಾದ ಮತ್ತೊಬ್ಬ ನಟಿ ಹಾಗೂ ಇಬ್ಬರು ಸೀರಿಯಲ್​ ನಟರ ಹೆಸರನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗ್ತಿದೆ. ಇದೀಗ ಬಂಧನಕ್ಕೊಳಗಾಗಿರುವ ಸಂಜನಾ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಕೆ.ಸಿ. ಜನರಲ್​ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Last Updated : Sep 8, 2020, 3:33 PM IST

ABOUT THE AUTHOR

...view details