ಬೆಂಗಳೂರು: 'ಡಾಕ್ಟರೇಟ್ ಪದವಿ ಪಡೆದು ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. 60 ವರ್ಷ ತುಂಬಿದ್ಮೇಲೆ ಮತ್ತೊಂದು ಹೊಸ ಯುಗ ಆರಂಭವಾಗುತ್ತೆ ಅಂತ ನಾನು ಪ್ರತಿ ಸಲ ಹೇಳ್ತೀನಿ. ಇದೀಗ ಈ ಪದವಿಯಿಂದ ಮತ್ತೊಂದು ಶಕ್ತಿ, ಉತ್ಸಾಹ ಸಿಕ್ಕಿದೆ' ಎಂದು ನಟ ರವಿಚಂದ್ರನ್ ಹೇಳಿದರು.
ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಬಳಿಕ ಅವರು ಮಾತನಾಡಿದರು.
ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಮಾತು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಮಾತನಾಡಿ, ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರೇ ಪದವಿ, ಚಿನ್ನದ ಪದಕ ಪಡೆದಿದ್ದು, ಹೆಣ್ಮಕ್ಕಳ ಸಾಧನೆಯನ್ನು ಕೊಂಡಾಡಿದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಬಿಜೆಪಿ ತಾಲೀಮು.. ರಾಜ್ಯದ ರೌಂಡ್ಸ್‌ಗೆ ಕಟೀಲ್-ಅರುಣ್‌ಸಿಂಗ್-ಸಿಎಂ ನೇತೃತ್ವದಲ್ಲಿ 3 ತಂಡ ರೆಡಿ..
ಸಚಿವ ಅಶ್ವತ್ಥ್ ನಾರಾಯಣ ಮಾತನಾಡುತ್ತಾ, ಗುಣಮಟ್ಟದ ಶಿಕ್ಷಣವಿಲ್ಲದೇ ಇದ್ದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ. ಬೆಂಗಳೂರು ಸಿಟಿ ಯುನಿವರ್ಸಿಟಿ ಕನಸಿನ ವಿವಿ ಆಗಬೇಕು. ದೊಡ್ಡ ದೊಡ್ಡ ಯೋಚನೆ, ಯೋಜನೆಗಳ ಮೂಲಕ ವಿಶ್ವ ಮಟ್ಟದಲ್ಲೂ ಹೆಸರು ಪಡೀಬೇಕು ಎಂದು ಹೇಳಿದರು.
ಸಚಿವ ಅಶ್ವತ್ಥ್ ನಾರಾಯಣ್ ಮಾತು 'ಚಿನ್ನ'ದ ವಿದ್ಯಾರ್ಥಿಗಳ ವಿವರ:
- ಪೂರ್ವ ಎನ್ ಗಾಂಧಿ- ಬಿ.ಕಾಂ- 3 ಚಿನ್ನದ ಪದಕ
- ತಾಕಿಯ ಖಾನಮ್- ಬಿಬಿಎ- 2 ಚಿನ್ನದ ಪದಕ
- ದುವ್ವುರು ಅಲೇಕ್ಯಾ- ಎಂ.ಬಿಎ- 2 ಚಿನ್ನದ ಪದಕ
- ಆನ್ ಮೇರಿ ಸೆಬಾಸ್ಟಿಯನ್- ಎಂಎಸ್ಸಿ- 2 ಚಿನ್ನದ ಪದಕ
- ನಿವೇದಿತಾ.ಬಿ.ಎಸ್-ಎಂ.ಎಸ್ಸಿ- 2 ಚಿನ್ನದ ಪದಕ
- ಅನಿತಾ ಕರೆನ್ ಪೆರೈಗಾ- ಎಂ.ಎ. ಫ್ರೆಂಚ್- 2 ಚಿನ್ನದ ಪದಕ