ಕರ್ನಾಟಕ

karnataka

ETV Bharat / state

ನನ್ನ ಕೆರಿಯರ್ ಹಾಳಾಗತ್ತೆ ಮತ್ತೆ ಕರೆಯಬೇಡಿ.. ಸಿಸಿಬಿ ಬಳಿ ನಟ ದಿಗಂತ್ ಮನವಿ? - ದಿಗಂತ್​​ ವಿಚಾರಣೆ

ಇದರ ವಿಚಾರಣೆ ಸಂಬಂಧ ದಿಗಂತ್ ಅವರಿಗೆ 2ನೇ ಬಾರಿ ಸಿಸಿಬಿ ನೋಟಿಸ್ ನೀಡಿತ್ತು. 2ನೇ ಬಾರಿ ತನಿಖೆ ಮಾಡಿದ್ದರೂ ಸಿಸಿಬಿ ದಿಗಂತ್‌ಗೆ ಮೊಬೈಲ್ ಕೊಟ್ಟಿಲ್ಲ..

Actor Digant appealed to CCB officials
ನನ್ನ ಕೆರಿಯರ್ ಹಾಳಾಗತ್ತೆ ಮತ್ತೆ ಕರೆಯಬೇಡಿ : ಸಿಸಿಬಿ ಬಳಿ ನಟ ದಿಗಂತ್ ಮನವಿ

By

Published : Sep 23, 2020, 4:17 PM IST

Updated : Sep 23, 2020, 4:24 PM IST

ಬೆಂಗಳೂರು :ನನ್ನ ಕೆರಿಯರ್‌ ಹಾಳಾಗತ್ತೆ, ಮತ್ತೆ ಕರೆಯಬೇಡಿ ಪ್ಲೀಸ್.. ಹೀಗೆ ಸಿಸಿಬಿ ತನಿಖಾಧಿಕಾರಿಗಳ‌ ಮುಂದೆ ನಟ ದಿಗಂತ್ ಹೇಳಿರುವುದಾಗಿ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ‌. ಸ್ಯಾಂಡಲ್​​ವುಡ್​​ಗೆ ಡ್ರಗ್ಸ್ ನಂಟು ಸಂಬಂಧ ಇಂದು ಎರಡನೇ ಬಾರಿಗೆ ಸಿಸಿಬಿ ತನಿಖಾಧಿಕಾರಿಗಳ ಮುಂದೆ ದಿಗಂತ್ ಹಾಜರಾಗಿದ್ದರು. ಸುಮಾರು ಐದು ತಾಸುಗಳ ವಿಚಾರಣೆಯನ್ನ ದಿಗಂತ್‌ಗೆ ನಡೆಸಲಾಗಿದೆ.

ನನ್ನ ಕೆರಿಯರ್ ಹಾಳಾಗತ್ತೆ ಮತ್ತೆ ಕರೆಯಬೇಡಿ.. ಸಿಸಿಬಿ ಬಳಿ ನಟ ದಿಗಂತ್ ಮನವಿ?

ಪದೇಪದೆ ವಿಚಾರಣೆಗೆ ಕರೆಯಬೇಡಿ. ನನ್ನ ವೃತ್ತಿ ಜೀವನ ಹಾಳಾಗುತ್ತೆ‌. ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತೆ. ಏನೇ ಇದ್ರೂ ಈಗಲೇ ಕೇಳಿ, ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದು ತನಿಖಾಧಿಕಾರಿಗಳ ಮುಂದೆ ದಿಗಂತ್ ಮನವಿ ಮಾಡಿದ್ದಾರೆ. ವಿಚಾರಣೆ ಮುಗಿಸಿ ಹೊರ ಬಂದು ಮಾತನಾಡಿದ ದಿಗಂತ್, ನೀವು ಅಂದುಕೊಂಡಂತೆ ಏನೂ ನಡೆದಿಲ್ಲ. ವಿಚಾರಣೆಗೆ ಕರೆದ್ರೆ‌ ಮತ್ತೆ ಬಂದು ತನಿಖೆಗೆ ಸಹಕಾರ ಕೊಡುತ್ತೇನೆ ಎಂದಷ್ಟೇ ಹೇಳಿ‌ ನಿರ್ಗಮಿಸಿದರು.

ದಿಗಂತ್ 2ನೇ ಬಾರಿ ವಿಚಾರಣೆಗೆ ಹಾಜರಾಗಿದ್ದು ಯಾಕೆ?:ದಿಗಂತ್​​ಗೆ ಡ್ರಗ್ಸ್‌ ಪೆಡ್ಲರ್ ಜೊತೆ ಸಂಪರ್ಕ ಇರೋದರ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿತ್ತು. ಇದೇ ವಿಚಾರವಾಗಿ ಇಂದು ವಿಚಾರಣೆಗೆ ಕರೆದಿತ್ತು. ವಿಚಾರಣೆ ವೇಳೆ ಕೆಲ ಪೆಡ್ಲರ್​ಗಳ ಹೆಸರು ಹೇಳಿದ್ದರು. ಈ ಮಾಹಿತಿ ಆಧರಿಸಿ ಕೆಲ ಡ್ರಗ್ಸ್ ಫೆಡ್ಲರ್​​ಗಳನ್ನು ಸಿಸಿಬಿ ಬಂಧಿಸಿತ್ತು. ಇದರ ವಿಚಾರಣೆ ಸಂಬಂಧ ದಿಗಂತ್ ಅವರಿಗೆ 2ನೇ ಬಾರಿ ಸಿಸಿಬಿ ನೋಟಿಸ್ ನೀಡಿತ್ತು. 2ನೇ ಬಾರಿ ತನಿಖೆ ಮಾಡಿದ್ದರೂ ಸಿಸಿಬಿ ದಿಗಂತ್‌ಗೆ ಮೊಬೈಲ್ ಕೊಟ್ಟಿಲ್ಲ. ಮತ್ತೆ ವಿಚಾರಣೆಗೆ ಕರೆಯೋದಾಗಿ ಹೇಳಿ ತನಿಖಾಧಿಕಾರಿಗಳು ಕಳುಹಿಸಿದ್ದಾರೆ.

Last Updated : Sep 23, 2020, 4:24 PM IST

ABOUT THE AUTHOR

...view details