ಬೆಂಗಳೂರು:ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಗ್ಯಾಂಗ್ರಿನ್ ಲಕ್ಷಣಗಳು ಕಂಡು ಬಂದಿದ್ದು, ನಡೆದಾಡಲು ಆಗದೆ ವಿಕ್ಟೋರಿಯಾ ಆಸ್ಪತ್ರೆ ಮತ್ತು ಜೈಲಿನ ಆಸ್ಪತ್ರೆ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಆ್ಯಸಿಡ್ ದಾಳಿ: ಯುವತಿ ಆರೋಗ್ಯದಲ್ಲಿ ಚೇತರಿಕೆ, ಗ್ಯಾಂಗ್ರಿನ್ನಿಂದ ಬಳಲುತ್ತಿರುವ ಆರೋಪಿ - ಆರೋಪಿ ನಾಗೇಶನಿಗೆ ಆರೋಗ್ಯದ ಸಮಸ್ಯೆ
ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಇದೇ ವರ್ಷ ಎಪ್ರಿಲ್ 28ರಂದು ಯುವತಿಗೆ ಆರೋಪಿ ನಾಗೇಶ ಆ್ಯಸಿಡ್ ಎರಚಿದ್ದನು. ಈಗ ಗ್ಯಾಂಗ್ರಿನ್ನಿಂದ ಬಳಲುತ್ತಿದ್ದಾನೆ.
ವಿಧಿಯ ಶಿಕ್ಷೆಗೆ ಸಿಲುಕಿದ ಆರೋಪಿ ನಾಗೇಶ್
ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಇದೇ ವರ್ಷ ಎಪ್ರಿಲ್ 28ರಂದು ಮುತ್ತೂಟ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಆರೋಪಿ ನಾಗೇಶ ಆ್ಯಸಿಡ್ ಎರಚಿದ್ದ. ತಲೆಮರೆಸಿಕೊಂಡಿದ್ದ ನಾಗೇಶನ ಕಾಲಿಗೆ ಗುಂಡು ಹಾರಿಸುವ ಮೂಲಕ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ಜೈಲಿನಲ್ಲಿರುವ ನಾಗೇಶನಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ:ಕೊನೆಗೂ ಆ್ಯಸಿಡ್ ನಾಗನ ಬಂಧನ.. ಖಾವಿ ಧರಿಸಿ ಧ್ಯಾನ ಮಾಡುತ್ತಿದ್ದಾಗಲೇ ಪೊಲೀಸ್ ಬಲೆಗೆ!