ಬೆಂಗಳೂರು:ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೈ ಶಾಸಕ ಶ್ರೀಮಂತ್ ಪಾಟೀಲ್ ಹೇಳಿಕೆ ಪಡೆಯಲು ನಿನ್ನೆ ತಡರಾತ್ರಿ ರಾಜ್ಯ ಪೊಲೀಸರ ತಂಡ ಮುಂಬೈ ತಲುಪಿದೆ.
ಇಂದು ಬೆಳಗ್ಗೆ 9 ಗಂಟೆಗೆ ಮುಂಬೈ ಸೇಂಟ್ ಜಾರ್ಜಸ್ ಆಸ್ಪತ್ರೆಗೆ ತೆರಳಿದ ಡಿಸಿಪಿ ಶಶಿಕುಮಾರ್ ನೇತೃತ್ವದ ಪೊಲೀಸರ ತಂಡ ಇಂದು ಅವರ ವಿಚಾರಣೆ ನಡೆಸಲಿದೆ.
ನಿನ್ನೆ ಕಾಂಗ್ರೆಸ್ ನಾಯಕರು ಶ್ರೀಮಂತ್ ಪಾಟೀಲ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ವಿಧಾನಸೌಧ ಠಾಣೆಯಲ್ಲಿ ಶ್ರೀಮಂತ ಪಾಟೀಲ್ ಕಾಣೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಹಿನ್ನೆಲೆ ರಾಜ್ಯದಿಂದ ಪೊಲೀಸರ ತಂಡ ಆಗಮನವಾಗಿದೆ.
ಮುಂಬೈನ ಸೇಂಟ್ ಜಾರ್ಜಸ್ ಆಸ್ಪತ್ರೆ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಶಾಸಕರಿಂದ ಹೇಳಿಕೆ ಪಡೆಯುವಂತೆ ಸೂಚನೆ ನೀಡಲಾಗಿದೆ. ನಿನ್ನೆ ಸದನದಲ್ಲಿ ಸ್ಪೀಕರ್, ಗೃಹ ಸಚಿವ ಎಂ.ಬಿ.ಪಾಟೀಲ್ಗೆ ಕಿಡ್ನ್ಯಾಪ್ ಆರೋಪ ಸಂಬಂಧ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು.
ಸದ್ಯ ಮುಂಬೈನ ಸೇಂಟ್ ಜಾರ್ಜಸ್ ಆಸ್ಪತ್ರೆಯಲ್ಲಿ ಎದೆ ನೋವಿನ ಕಾರಣ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೀಕರ್ಗೂ ಈ ಸಂಬಂಧ ಶ್ರೀಮಂತ್ ಪಾಟೀಲ್ ವಿಡಿಯೋ ಹೇಳಿಕೆಯನ್ನು ಕಳುಹಿಸಿದ್ದರು.