ಕರ್ನಾಟಕ

karnataka

ETV Bharat / state

ಯುವತಿ ಮೇಲೆ ಆ್ಯಸಿಡ್​ ದಾಳಿ ಹಿಂದಿನ ಕಾರಣ ಬಾಯ್ಬಿಟ್ಟ ಆರೋಪಿ ನಾಗ.. ಕಾರಣ ಇದೇ ಅಂತೆ! - ಯುವತಿ ಮೇಲೆ ಆ್ಯಸಿಡ್​ ದಾಳಿ ಹಿಂದಿನ ಕಾರಣ ಬಾಯ್ದಿಟ್ಟ ಆರೋಪಿ ನಾಗೇಶ್​

ಬೆಂಗಳೂರು ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಆರೋಪಿ ನಾಗೇಶ್ ಪೊಲೀಸ್ ವಿಚಾರಣೆಯಲ್ಲಿ ಕೆಲವು ವಿಚಾರಗಳ ಬಗ್ಗೆ ಬಾಯ್ದಿಟ್ಟಿದ್ದಾನೆ ಎನ್ನಲಾಗಿದೆ.

accused-nagesh-tell-reason-behind-acid-attack
ಯುವತಿ ಮೇಲೆ ಆ್ಯಸಿಡ್​ ದಾಳಿ ಹಿಂದಿನ ಕಾರಣ ಬಾಯ್ದಿಟ್ಟ ಆರೋಪಿ ನಾಗ

By

Published : May 14, 2022, 7:06 PM IST

ಬೆಂಗಳೂರು:ಆ್ಯಸಿಡ್ ದಾಳಿ ನಡೆಸುವ ಉದ್ದೇಶ ನನಗಿರಲಿಲ್ಲ. ಆದರೆ ಯುವತಿಯು ನನ್ನ ತಂದೆ ಹಾಗೂ ಅಣ್ಣನಿಗೆ ದೂರು ಹೇಳಿದ್ದರಿಂದ ಆ್ಯಸಿಡ್ ಎರಚಿರುವುದಾಗಿ ಆರೋಪಿ ನಾಗೇಶ್ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಆ್ಯಸಿಡ್ ದಾಳಿ ನಡೆಸಲು ಯುವತಿಯೇ ಕಾರಣವಾಗಿದ್ದು, ನಾನು ಪ್ರೀತಿಸಿ ಹಿಂದೆ ಬಿದ್ದಿರುವ ವಿಷಯವನ್ನು ನನ್ನ ತಂದೆ ಹಾಗೂ ಅಣ್ಣನಿಗೆ ತಿಳಿಸಿ, ತನಗೆ ಬೈಯ್ಯಲು ಕಾರಣವಾಗಿದ್ದರಿಂದ ಆಕ್ರೋಶಗೊಂಡು ಕೃತ್ಯ ನಡೆಸಿದ್ದೇನೆ ಎಂದು ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.

ಯುವತಿಯ ಮೇಲೆ ಆ್ಯಸಿಡ್ ಹಾಕಬಾರದೆಂದು ಈ ಹಿಂದೆ ಯೋಚಿಸಿದ್ದೆ. ಘಟನೆ ಹಿಂದಿನ ದಿನ ದಾಳಿ ಬಗ್ಗೆ ಯುವತಿಗೆ ಹೆದರಿಸಿದ್ದೆನಷ್ಟೆ. ಆದರೆ ಯುವತಿಯು ಈ ವಿಷಯವನ್ನು ನನ್ನ ತಂದೆಯ ಬಳಿ ಹೇಳಿದ್ದಳು. ಅದು ನನ್ನ ಅಣ್ಣನಿಗೆ ಗೊತ್ತಾಗಿತ್ತು. ಯುವತಿಯಿಂದ ವಿಷಯ ತಿಳಿದುಕೊಂಡು ನನಗೆ ಸಾಕಷ್ಟು ಬೈದಿದ್ದ. ಇದರಿಂದ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿದೆ ಎಂದು ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಆತ್ಮಹತ್ಯೆ ಯತ್ನ:ಅಲ್ಲದೆ, ಕೃತ್ಯದ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿ, ನಂತರ ಮನಸ್ಸು ಬದಲಿಸಿ ಹಿಂದೆ ಸರಿದೆ ಎಂದಿದ್ದಾನೆ. ಕೋರ್ಟ್ ಬಳಿ ಬಂದು ಜಾಮೀನು ಯತ್ನ ನಡೆಸಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲ್ಲಿಯೇ ಬೈಕ್ ಬಿಟ್ಟು ಆಟೋ ಹತ್ತಿದ್ದೆ. ಹೊಸಕೋಟೆವರೆಗೂ ಆಟೋದಲ್ಲಿ ತೆರಳಿ, ಅಲ್ಲಿ ಒಂದು ಕೆರೆ ಕಂಡು ಹಾರಿ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ, ಬೇಡ ತಿರುಪತಿಗೆ ಹೋಗೋಣ ಎಂದು ಮಾಲೂರು ಬಸ್ ಹತ್ತಿದೆ. ತಿರುಪತಿ ಬೇಡ ಎಂದೆನಿಸಿ ಮಾರ್ಗ ಮಧ್ಯೆ ಇಳಿದು ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ಹೋಗಿ ರಮಣಾಶ್ರಮದಲ್ಲಿ ಉಳಿದುಕೊಂಡೆ ಎಂದು ತನಿಖೆ ವೇಳೆ ತಿಳಿಸಿದ್ದಾನೆ.

ಇದನ್ನೂ ಓದಿ:ಆ್ಯಸಿಡ್​ ನಾಗನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆಯಾಗಲಿ, ಆತನೂ ನರಳಬೇಕು: ಸಂತ್ರಸ್ತೆಯ ಆಕ್ರೋಶ

ABOUT THE AUTHOR

...view details