ಬೆಂಗಳೂರು: ಜಮೀನು ವಿವಾದವೊಂದರ ಇತ್ಯರ್ಥಕ್ಕೆ ಲಂಚ ಪಡೆದ ಆರೋಪದಡಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರಿಗೆ ಜೈಲು ನಿಯಮದ ಪ್ರಕಾರ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.
ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತಿದ್ದಂತೆ ಜೈಲು ಅಧಿಕಾರಿಗಳು ಆರೋಪಿಗೆ 6773/2022 ನಂಬರ್ ನೀಡಿದ್ದಾರೆ. ಜೈಲು ಸೇರುವ ಪ್ರತಿಯೊಬ್ಬ ವಿಚಾರಣಾಧೀನ ಕೈದಿಗೂ ಗುರುತಿನ ಸಂಖ್ಯೆ ನೀಡುವುದು ನಿಯಮ ಎಂದು ಅಧಿಕಾರಿಗಳು ತಿಳಿಸಿದರು.