ಕರ್ನಾಟಕ

karnataka

ETV Bharat / state

ನಾನು ಮೊದಲು ಮಂಡ್ಯನ್​, ಆಮೇಲೆ ಇಂಡಿಯನ್​: ನನಗೂ ಟಿಕೆಟ್​ ಕೊಡಿ ಎಂದ ಬಿಜೆಪಿ ಮುಖಂಡ! - ಲೋಕಸಭಾ ಚುನಾವಣೆ

ತಮಗೆ ಮಂಡ್ಯದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್​ ನೀಡಬೇಕೆಂದು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಮ್ ಮನವಿ ಮಾಡಿಕೊಂಡಿದ್ದಾರೆ.

ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಮ್

By

Published : Mar 9, 2019, 5:34 PM IST

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮಂಡ್ಯದಿಂದ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ ಬೇಡವೋ ಎನ್ನುವ ನಿರ್ಧಾರ ತೆಗೆದೊಳ್ಳುವ ಮೊದಲೇ ಆಕಾಂಕ್ಷಿಗಳು ಟಿಕೆಟ್​ಗಾಗಿ ಪೈಪೋಟಿ ಆರಂಭಿಸಿದ್ದಾರೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಜೊತೆ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಮ್ ತಮಗೆ ಟಿಕೆಟ್ ನೀಡಿಬೇಕೆಂದು ಬೇಡಿಕೆ‌ ಇಟ್ಟಿದ್ದಾರೆ.

ಹೌದು, ಲೋಕಸಭಾ ಚುನಾವಣಾ ಅಭ್ಯರ್ಥಿ ವಿಚಾರ ಹೈಕಮಾಂಡ್​ ಅಂಗಳ ತಲುಪಿದ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಸ್​ಗೆ ಮತ್ತೊಬ್ಬ ಆಕಾಂಕ್ಷಿ ಎಂಟ್ರಿಯಾಗಿದ್ದಾರೆ. ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್​​ಗೆ ಇದೀಗ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಮ್ ತಮಗೆ ಟಿಕೆಟ್ ನೀಡಿಬೇಕೆಂದು ಬೇಡಿಕೆ‌ ಇಟ್ಟಿದ್ದು, ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ಬೆಳೆಯತೊಡಗಿದೆ.

ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಮ್

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅಬ್ದುಲ್ ಅಜೀಮ್, ನಾನು ಮೊದಲು ಮಂಡ್ಯನ್, ಆನಂತರ ಇಂಡಿಯನ್. ನಾನು ನಿಜವಾದ ಹೀರೋ. ನನಗೆ ಎಲ್ಲ ಅರ್ಹತೆಗಳು ಇವೆ. ಮಂಡ್ಯದಲ್ಲಿ ನಮ್ಮ ಕುಟುಂಬಕ್ಕೆ 600 ವರ್ಷಗಳ ಇತಿಹಾಸವಿದೆ. ನನಗೆ ಮಂಡ್ಯದವರನ್ನು ಹೇಗೆ ಮನವೊಲಿಸಬೇಕೆಂಬುದು ಗೊತ್ತಿದೆ. ಹಾಗಾಗಿ, ನನಗೆ ಟಿಕೆಟ್​ ನೀಡಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಟಿಕೆಟ್​ ನೀಡುವಂತೆ ಮನವಿ ಮಾಡಿದ್ದೇನೆ. ಟಿಕೆಟ್ ವಿಚಾರವಾಗಿ ಅಶೋಕ್ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದೇನೆ. ಈ ಹಿಂದೆ ನಾನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿ ಒಂದೂವರೆ ಲಕ್ಷ ಮತ ಪಡೆದಿದ್ದೆ. ಹಾಗಾಗಿ, ಈ ಬಾರಿ ಮಂಡ್ಯದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.

ABOUT THE AUTHOR

...view details