ಬೆಂಗಳೂರು: ಪೇಟಿಎಂ ಕ್ಯೂಆರ್ ಕೋಡ್ ಮಾದರಿಯಲ್ಲಿ ಕಾಂಗ್ರೆಸ್ ರಚಿಸಿದ ಪೇಸಿಎಂ ಪೋಸ್ಟರ್ ವೈರಲ್ ಆದ ಬೆನ್ನಲ್ಲೇ ಇದೀಗ ಆಮ್ ಆದ್ಮಿ ಪಾರ್ಟಿ ಕೂಡ ಕ್ಯೂಆರ್ ಕೋಡ್ ಮಾದರಿಯ ಪೋಸ್ಟರ್ ತಯಾರಿಸಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಟಕ್ಕರ್ ಕೊಟ್ಟಿದೆ.
ಕಾಂಗ್ರೆಸ್ನಿಂದ ಸಿಎಂ ಬಸವರಾಜ ಬೊಮ್ಮಾಯಿ ಪೇಸಿಎಂ ಕ್ಯೂಆರ್ ಕೋಡ್ ಹಾಗೂ ಬಿಜೆಪಿಯವರು ಬಿಡುಗಡೆ ಮಾಡಿದ್ದ ಪೇ ಎಕ್ಸ್ ಸಿಎಂ ಕ್ಯೂಆರ್ ಕೋಡ್ ಜೊತೆಗೆ ಜೆಡಿಎಸ್ ಚಿಹ್ನೆ ಕ್ಯೂಆರ್ ಕೋಡನ್ನೂ ಸೇರಿಸಿ ಆಮ್ ಆದ್ಮಿ ಪಾರ್ಟಿಯು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ.