ಕರ್ನಾಟಕ

karnataka

ETV Bharat / state

ಬಿಎಂಟಿಸಿ ಚಾಲಕ ಆತ್ಮಹತ್ಯೆ ಕೇಸ್​.. ಡಿಪೋ ಮ್ಯಾನೇಜರ್ ಸಸ್ಪೆಂಡ್: ಆಪ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಬಿಎಂಟಿಸಿ ಚಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಡಿಪೋ ಮ್ಯಾನೇಜರ್ ಹಾಗೂ ಸಹಾಯಕ ಟ್ರಾಫಿಕ್ ಕಂಟ್ರೋಲರ್ ದಾಬೋಜಿ ಅವರನ್ನು ಅಮಾನತು ಮಾಡಲಾಗಿದೆ.

ಸಿಹಿ ಹಂಚಿ ಆಪ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಸಿಹಿ ಹಂಚಿ ಆಪ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

By

Published : Sep 4, 2022, 9:00 PM IST

ಬೆಂಗಳೂರು: ನಗರದ ಆರ್ ಆರ್ ನಗರದ ಚನ್ನಸಂದ್ರ ಬಿಎಂಟಿಸಿ ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ್ ಹಾಗೂ ಸಹಾಯಕ ಟ್ರಾಫಿಕ್ ಕಂಟ್ರೋಲರ್ ದಾಬೋಜಿ ಅಮಾನತು ಆದೇಶ ಹೊರಬಿದ್ದಿದೆ. ಈ ಹಿನ್ನೆಲೆ ಸಿಹಿ ಹಂಚುವ ಮೂಲಕ ಆಮ್ ಆದ್ಮಿ ಪಕ್ಷ ಚನ್ನಸಂದ್ರ ಡಿಪೋದಲ್ಲಿ ಸಂಭ್ರಮಾಚರಣೆ ಮಾಡಿತು.

ಆಮ್ ಆದ್ಮಿ ಪಕ್ಷದ ನಗರಾಧ್ಯಕ್ಷ ಮೋಹನ್ ದಾಸರಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಡಿಪೋ ಮ್ಯಾನೇಜರ್ ಹಾಗೂ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಧಿಕಾರಿಗಳ ಕಿರುಕುಳ ಮಾನಸಿಕ ಹಿಂಸೆಯನ್ನು ತಡೆಯಲಾರದೆ ಸಾರಿಗೆ ನೌಕರರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಇದೇ ರೀತಿ ಹೊಳೆ ಬಸಪ್ಪ ಎಂಬ ಚಾಲಕನು ಕಳೆದ 4 ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು.

ಸಿಹಿ ಹಂಚಿ ಆಪ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಪಕ್ಷ ನೌಕರರ ಪರವಾಗಿ ಇರುತ್ತದೆ: ನಮ್ಮ ಸತತ ಹೋರಾಟದ ಫಲವಾಗಿ ಇದೀಗ ಸಂಸ್ಥೆಯು ಅಮಾನತು ಕ್ರಮವನ್ನು ತೆಗೆದುಕೊಂಡಿರುವುದು ಸಾರಿಗೆ ನೌಕರರಲ್ಲಿ ಆಶಾಭಾವನೆಯನ್ನು ಮೂಡಿಸಿದೆ. ಯಾವುದೇ ಕಾರಣಕ್ಕೂ ನೌಕರರು ಆತ್ಮಹತ್ಯೆಯ ಹಾದಿಯನ್ನು ಹಿಡಿಯಬಾರದು. ಆಮ್ ಆದ್ಮಿ ಪಕ್ಷವು ಸದಾ ನೌಕರರ ಪರವಾಗಿ ಇರುತ್ತದೆ ಎಂದು ಭರವಸೆ ನೀಡಿದರು.

ಆಮ್ ಆದ್ಮಿ ಪಕ್ಷದ ನಗರಾಧ್ಯಕ್ಷ ಮೋಹನ್ ದಾಸರಿ ಅವರು ಮಾತನಾಡಿರುವುದು

ಸಾರಿಗೆ ಸಂಸ್ಥೆಯನ್ನು ಉಳಿಸಬೇಕು: ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ರಾಜೀನಾಮೆಯನ್ನು ನೀಡಿ ಸಾರಿಗೆ ಸಂಸ್ಥೆಯನ್ನು ಉಳಿಸಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದರು.

ಈ ಸಂಭ್ರಮಾಚರಣೆಯಲ್ಲಿ ಪಕ್ಷದ ಮುಖಂಡರುಗಳಾದ ಜಗದೀಶ್ ವಿ. ಸದಂ, ಸುರೇಶ್ ರಾಥೋಡ್, ಮುಖೇಶ್ ತೀರನ್ ನೌಕರರ ನಾಯಕರುಗಳಾದ ಜಗದೀಶ್, ರಾಮು ಇನ್ನಿತರರು ಭಾಗವಹಿಸಿದ್ದರು.

ಓದಿ:ಮದ್ಯದ ಅಮಲಿನಲ್ಲಿ ಗಣೇಶ ಮೂರ್ತಿಗಳ ವಿರೂಪಗೊಳಿಸಿದ ಯುವಕರು.. ಐವರ ಬಂಧನ

ABOUT THE AUTHOR

...view details