ಕರ್ನಾಟಕ

karnataka

ETV Bharat / state

ವ್ಯಾಕ್ಯೂಮ್​​ ಮೂಲಕ ಕ್ಲಿಷ್ಟಕರ ಹೆರಿಗೆ: ಮಹಿಳಾ ದಿನದಂದು ಉಚಿತ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ - Vaccum

ಗರ್ಭಿಣಿಗೆ ಹೆರಿಗೆ ನೋವು ತಾಳಲಾರದೆ ಸಿಸೇರಿಯನ್ ಮಾಡುವಂತೆ ಪಾಲಕರು ಒತ್ತಾಯಿಸಿದ್ದಾರೆ. ಆದರೆ ನಂತರ ಡಾ. ಗೌರಾ ವಾಸನದ ಪಾಲಕರಿಗೆ ತಿಳಿ ಹೇಳಿ ಜವಾಬ್ದಾರಿ ತೆಗೆದುಕೊಂಡು ವ್ಯಾಕ್ಯೂಮ್ ಮೂಲಕ ಹೆರಿಗೆ ಮಾಡಿಸಿ ಯಶಸ್ಸು ಕಂಡಿದ್ದಾರೆ.

a-private-hospital-that-provided-free-treatment-as-part-of-womens-day
ಮಹಿಳಾ ದಿನ ಅಂಗವಾಗಿ ಉಚಿತ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ

By

Published : Mar 8, 2021, 9:52 PM IST

ಬಾಗಲಕೋಟೆ: ವಿಶ್ವ ಮಹಿಳಾ‌ ದಿನಾಚರಣೆ ಅಂಗವಾಗಿ ಬಾಗಲಕೋಟೆ ನಗರದ ವಾಸನದ ಆಸ್ಪತ್ರೆ ವೈದ್ಯರು ಗರ್ಭಿಣಿಯೊಬ್ಬರಿಗೆ ಉಚಿತ ಚಿಕಿತ್ಸೆ ನೀಡಿದ್ದಲ್ಲದೆ, ಕ್ಲಿಷ್ಟಕರ ರೀತಿಯ ಹೆರಿಗೆ ಮಾಡಿಸಿ ಮಾದರಿಯಾಗಿದ್ದಾರೆ.

ಸಾವಿರಾರು ರೂಪಾಯಿ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳ ಸಾಲಿನಲ್ಲಿ ಸೇರದೆ ಉಚಿತವಾಗಿ ಚಿಕಿತ್ಸೆ ನೀಡಿದ ವಾಸನದ ಖಾಸಗಿ ಆಸ್ಪತ್ರೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹಿಳಾ ದಿನ ಅಂಗವಾಗಿ ಉಚಿತ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ

ರಾತ್ರಿ ಸಮಯದಲ್ಲಿ ಬಾದಾಮಿ ತಾಲೂಕಿನ ಕಲಬಂದಕೇರಿ ಗ್ರಾಮದ ನಿವಾಸಿ 23 ವರ್ಷದ ಮಂಜುಳಾ ನಂದಿಹಾಳಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೆರಿಗೆ ನೋವು ತಾಳಲಾರದೆ ಸಿಸೇರಿಯನ್ ಮಾಡುವಂತೆ ಪಾಲಕರು ಒತ್ತಾಯಿಸಿದ್ದಾರೆ. ಆದರೆ ನಂತರ ಡಾ.ಗೌರಾ ವಾಸನದ ಪಾಲಕರಿಗೆ ತಿಳಿ ಹೇಳಿ ಜವಾಬ್ದಾರಿ ತೆಗೆದುಕೊಂಡು ವ್ಯಾಕ್ಯೂಮ್ ಮೂಲಕ ಹೆರಿಗೆ ಮಾಡಿಸಿ ಯಶಸ್ಸು ಕಂಡಿದ್ದಾರೆ.

ಬಳಿಕ ಮಹಿಳಾ ದಿನಾಚರಣೆ ಹಿನ್ನೆಲೆ ಉಚಿತ ಚಿಕಿತ್ಸೆ ನೀಡುವುದಾಗಿ ವೈದ್ಯೆ ತಿಳಿಸಿದ್ದಾರೆ. ಇದರಿಂದ ಬಡ ಕುಟುಂಬಸ್ಥರು ಸಂತಸಗೊಂಡಿದ್ದು, ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ: ವಿಶೇಷವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ABOUT THE AUTHOR

...view details