ಬೆಂಗಳೂರು:ಪೊಲೀಸ್ ಇಲಾಖೆಗೆ ಹೊಸತಾಗಿ ಸೇರ್ಪಡೆಗೊಂಡು ಟ್ರೈನಿಂಗ್ನಲ್ಲಿ ನಿರತರಾಗಿದ್ದ ಟ್ರೈನಿಂಗ್ ಪೊಲೀಸರಿಗೂ ಕೊರೊನಾ ವಕ್ಕರಿಸಿದೆ.
ಬೆಂಗಳೂರು: ಪೊಲೀಸ್ ಟ್ರೈನಿಂಗ್ ಸ್ಕೂಲ್ನಲ್ಲಿ 90 ಮಂದಿಗೆ ಕೊರೊನಾ ದೃಢ! - ಥಣಿಸಂದ್ರ ಬಳಿಯ ಪೊಲೀಸ್ ಟ್ರೈನಿಂಗ್ ಸ್ಕೂಲ್
ಥಣಿಸಂದ್ರ ಬಳಿಯ ಪೊಲೀಸ್ ಟ್ರೈನಿಂಗ್ ಸ್ಕೂಲ್ನಲ್ಲಿ 500ಕ್ಕೂ ಹೆಚ್ಚು ಪೊಲೀಸರಿಗೆ ಟ್ರೈನಿಂಗ್ ನೀಡಲಾಗ್ತಿತ್ತು. ಆದರೆ ಇಂದು ಒಂದೇ ದಿನದಲ್ಲಿ 90 ಪೊಲೀಸರಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಥಣಿಸಂದ್ರ ಬಳಿಯ ಪೊಲೀಸ್ ಟ್ರೈನಿಂಗ್ ಸ್ಕೂಲ್ನಲ್ಲಿ 500ಕ್ಕೂ ಹೆಚ್ಚು ಪೊಲೀಸರಿಗೆ ಟ್ರೈನಿಂಗ್ ನೀಡಲಾಗ್ತಿತ್ತು. ಆದರೆ ಇಂದು ಒಂದೇ ದಿನದಲ್ಲಿ 90 ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೊಂಕಿತರನ್ನ ಪೊಲೀಸರಿಗೆ ಈಗಾಗಲೇ ನಿಗದಿತ ಕೋವಿಡ್ ಸೆಂಟರ್ಗೆ ದಾಖಲಿಸಲಾಗಿದೆ. ಹಾಗೆಯೇ ಉಳಿದೆಲ್ಲಾ ಟ್ರೈನಿಂಗ್ ಪೊಲೀಸರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು, ಕೆಲವರಿಗೆ ನೆಗೆಟಿವ್ ಬಂದಿದೆ. ಇನ್ನುಳಿದವರು ವರದಿಗೆ ಕಾಯುತ್ತಿದ್ದಾರೆ.
ಸದ್ಯ ಟ್ರೈನಿಂಗ್ ನಿಲ್ಲಿಸಿದ್ದು, ಎಲ್ಲಾ ಸಿಬ್ಬಂದಿ ಕ್ವಾರಂಟೈನ್ನಲ್ಲಿ ಇದ್ದಾರೆ. ಸಿಲಿಕಾನ್ ಸಿಟಿ ಸೇರಿದಂತೆ ಜಿಲ್ಲೆಯ ಹಲವಾರು ಕಡೆಗಳಿಂದ ಕೊರೊನಾ ಸೋಂಕು ಬರುವ ಮುಂಚೆಯೇ ಟ್ರೈನಿಂಗ್ ಸ್ಕೂಲ್ನಲ್ಲಿ ತರಬೇತಿ ಪಡೆಯುತ್ತಿದ್ದರು. ಅಡುಗೆ ಮಾಡಲು ಬರುವ ಅಡಿಗೆ ಕೆಲಸದವರಿಂದ ಪೊಲೀಸರಿಗೆ ಸೋಂಕು ಹಬ್ಬಿರುವ ಗುಮಾನಿ ಇದೆ. ನಗರದಲ್ಲಿ ಒಟ್ಟು ಸೋಂಕಿತ ಪೊಲೀಸರ ಸಂಖ್ಯೆ 1,084ಕ್ಕೆ ಏರಿದ್ದು, 661 ಪೊಲೀಸರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 414 ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 799 ಮಂದಿ ಪೊಲೀಸರು ಕ್ವಾರಂಟೈನ್ನಲ್ಲಿದ್ದಾರೆ.