ಬೆಂಗಳೂರು: ಬೆಂಗಳೂರು ನಗರದಲ್ಲಿ ಎರಡನೇ ಬಾರಿ ಶಾಸಕರದವರಿಗೆ ಸಚಿವ ಸ್ಥಾನ ನೀಡಲಾಗಿದ್ದು, 7 ಬಾರಿ ಗೆದ್ದವರನ್ನು ಮೂಲೆ ಗುಂಪು ಮಾಡಲಾಗಿದೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2 ಬಾರಿ ಗೆದ್ದವರು ಸಚಿವರಾದ್ರು,7 ಸಲ ಗೆದ್ದವರು ಮೂಲೆಗುಂಪು: ಮುನಿರತ್ನ ಕಿಡಿ - munirathna
ಬೆಂಗಳೂರು ನಗರದಲ್ಲಿ ಎರಡನೇ ಬಾರಿ ಶಾಸಕರದವರಿಗೆ ಸಚಿವ ಸ್ಥಾನ ನೀಡಲಾಗುತ್ತಿದ್ದು, 7 ಬಾರಿ ಗೆದ್ದವರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಆರ್ ಆರ್ ನಗರ ಶಾಸಕ ಮುನಿರತ್ನ ಕಿಡಿ ಕಾರಿದ್ದಾರೆ.
ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಮುನಿರತ್ನ, ನಾವು ಏನು ತಪ್ಪು ಮಾಡಿದ್ದೇವೆ? ಬೆಂಗಳೂರಿನಲ್ಲಿ ಕಾಂಗ್ರೆಸ್ ಕಟ್ಟಿದವರನ್ನು ಬಿಟ್ಟು, ಎಲ್ಲೋ ಗೆದ್ದವರನ್ನು ತಂದು ಸಚಿವ ಸ್ಥಾನ ಕೊಟ್ಟರೆ ನಾವು ಸುಮ್ಮನೆ ಇರುವುದಕ್ಕೆ ಆಗುತ್ತಾ ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರು ಶಾಸಕರು ಯಾವತ್ತೂ ಹೊರಗಡೆ ಹೋಗಿಲ್ಲ. ನೀವು ಮಾಡಿದ ತಪ್ಪಿನಿಂದ ನಾವು ಹೊರ ಬರಬೇಕಾಯಿತು. ಅವತ್ತು ನಮ್ಮನ್ನು ಗುರುತಿಸಿದ್ದರೆ ಕಾಂಗ್ರೆಸ್ನಲ್ಲೇ ಇರುತ್ತಿದ್ದೆವು. ನೀವು ಮಾಡಿದ ತಪ್ಪು ನಿರ್ಧಾರ ಈ ಬೆಳವಣಿಗೆಗೆ ಕಾರಣವಾಗಿದ್ದು, ನಾವು ಯಾವುದೇ ಕಾರಣಕ್ಕೂ ನಾಳೆ ನಡೆಯುವ ಕಲಾಪದಲ್ಲಿ ಭಾಗವಹಿಸಲ್ಲ ಎಂದು ಕೈ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.