ಕರ್ನಾಟಕ

karnataka

ETV Bharat / state

ಕೋವಿಡ್ ಸುಳಿಯಲ್ಲಿ ವಾರಿಯರ್ಸ್​​​: 2ನೇ ಅಲೆಗೆ ಬೆಂಗಳೂರಲ್ಲಿ 688 ಪೊಲೀಸ್​ ಸಿಬ್ಬಂದಿಗೆ ಕೊರೊನಾ - ಕೋವಿಡ್ ಸುಳಿಯಲ್ಲಿ ವಾರಿಯರ್ಸ್​​​

ನಗರ ಪೊಲೀಸ್ ಇಲಾಖೆಯು ಆಯಾ ವಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡುತ್ತಿದೆ. ವೈಟ್ ಫೀಲ್ಡ್, ಉತ್ತರ ಹಾಗೂ ದಕ್ಷಿಣ ವಲಯ ಸೇರಿದಂತೆ ಒಟ್ಟು 200 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ.

688-police-personnels-tests-positive-in-bangalore-so-for
ಕೋವಿಡ್ ಸುಳಿಯಲ್ಲಿ ವಾರಿಯರ್ಸ್

By

Published : Apr 29, 2021, 4:15 PM IST

ಬೆಂಗಳೂರು: ಕೊರೊನಾ 2ನೇ ಅಲೆಗೆ ಕೊರೊನಾ ವಾರಿಯರ್ಸ್​ ಸಹ ತುತ್ತಾಗಿದ್ದು, ಹಲವರು ಆಸ್ಪತ್ರೆಯಲ್ಲಿದ್ದರೆ, ಇನ್ನೂ ಹಲವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಈವರೆಗೆ 688 ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢವಾಗಿದ್ದು, ಇವರಲ್ಲಿ 541 ಮಂದಿ ಹೋಂ ಐಸೋಲೇಷನ್​​ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲದೆ 112 ಮಂದಿ ಕೊರೊನಾದಿಂದ ಗುಣಮುಖರಾಗಿದ್ದರೆ. 28 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ ಒಟ್ಟು 7 ಮಂದಿ ಪೊಲೀಸರು ಕೋವಿಡ್​​ಗೆ ಬಲಿಯಾಗಿದ್ದಾರೆ.

ಇನ್ನೆರಡು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

ಕೊರೊನಾ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆಯುಂಟಾಗಿದೆ. ಅಲ್ಲದೆ ಪೊಲೀಸರಿಗೂ ಬೆಡ್​​​ಗಳು ಸಿಗುತ್ತಿಲ್ಲ‌. ಈ ಹಿನ್ನೆಲೆ ನಗರ ಪೊಲೀಸ್ ಇಲಾಖೆಯು ಆಯಾ ವಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡುತ್ತಿದೆ. ವೈಟ್ ಫೀಲ್ಡ್, ಉತ್ತರ ಹಾಗೂ ದಕ್ಷಿಣ ವಲಯ ಸೇರಿದಂತೆ ಒಟ್ಟು 200 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ. ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details