ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 60 ಮಂದಿಗೆ ಕೊರೊನಾ‌ ಸೋಂಕು ದೃಢ: ಶೂನ್ಯ ಸಾವು - ರಾಜ್ಯದಲ್ಲಿ ಭಾನುವಾರದ ಕೊರೊನಾ ಪ್ರಕರಣಗಳು

ರಾಜ್ಯದ ಇವತ್ತಿನ ಕೋವಿಡ್‌ ಬುಲೆಟಿನ್ ಹೀಗಿದೆ..

ಕೊರೊನಾ
ಕೊರೊನಾ

By

Published : Apr 24, 2022, 9:49 PM IST

ಬೆಂಗಳೂರು: ರಾಜ್ಯದಲ್ಲಿಂದು 8,263 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 60 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,934ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ 0.72% ಕ್ಕೆ ಏರಿಕೆ ಕಂಡಿದೆ.

ಇತ್ತ 63 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯತನಕ 39,05,159 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಎಲ್ಲೂ ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಇಲ್ಲಿಯವರೆಗೆ 40,057 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,676ರಷ್ಟಿದೆ. ವಿಮಾನ ನಿಲ್ದಾಣದಿಂದ 2,926 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.

ಇದನ್ನೂ ಓದಿ:ಮುಸ್ಲಿಮರಿಗೆ ಪ್ರಧಾನಿ ಆಗುವ ಅರ್ಹತೆ ಇದೆ, ರಾಷ್ಟ್ರಪತಿ, ವಿಜ್ಞಾನಿಯಾದ ಉದಾಹರಣೆ ಇಲ್ಲವೇ?:ಡಿಕೆಶಿ

ಬೆಂಗಳೂರಿನಲ್ಲಿ 57 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 17,82,936 ಕ್ಕೆ ಏರಿಕೆ ಆಗಿದೆ. 52 ಮಂದಿ ಡಿಸ್ಚಾರ್ಜ್ ಆಗಿದ್ದು, ಈತನಕ ಗುಣಮುಖರಾದವರ ಸಂಖ್ಯೆ 17,64,367 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,606 ರಷ್ಟಿದೆ.

ರೂಪಾಂತರಿ ವೈರಸ್ ಅಪ್‌ಡೇಟ್ಸ್:ಅಲ್ಪಾ- 156, ಬೇಟಾ-08, ಡೆಲ್ಟಾ ಸಬ್ ಲೈನ್ ಏಜ್- 4620, ಇತರೆ- 311, ಒಮಿಕ್ರಾನ್- 3775, BAI.1.529- 947, BA1- 99, BA2- 2729, ಒಟ್ಟು- 8890

ABOUT THE AUTHOR

...view details