ಬೆಂಗಳೂರು: ನಗರದಲ್ಲಿಂದು ಒಂದೇ ದಿನಕ್ಕೆ 596 ಮಂದಿಗೆ ಕೊರೊನಾ ಹರಡಿದ್ದು, ನಗರದ ಒಟ್ಟು ಸೋಂಕಿತರ ಸಂಖ್ಯೆ 2531 ಕ್ಕೆ ಏರಿಕೆಯಾಗಿದೆ.
ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಕೊರೊನಾ ಹರಡಿದ್ದು, ಈಗಾಗಲೇ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಉಂಟಾಗಿದ್ದು, ಈಗ ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಅಪಾಯ ಎದುರಾಗಿದೆ. ಕೋವಿಡ್ ಆಸ್ಪತ್ರೆಗಳಾದ ವಿಕ್ಟೋರಿಯಾ, ರಾಜೀವ್ ಗಾಂಧಿ, ಬೌರಿಂಗ್ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ, ಹಲವು ಮಂದಿ ಸೋಂಕಿತರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಪಾಲಿಕೆಯೂ ಕ್ರಮಕ್ಕೆ ಮುಂದಾಗುತ್ತಿಲ್ಲ.
ಇಂದು ಕೇವಲ 7 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಕೇವಲ 533 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 1913 ಕ್ಕೆ ಏರಿಕೆಯಾಗಿದೆ. ಇಂದು ಮೂವರು ಮೃತಪಟ್ಟಿದ್ದು ಸಾವಿನ ಸಂಖ್ಯೆ 84 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 125 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವ ವಲಯದಲ್ಲಿ ಎಷ್ಟು ಕೊರೊನಾ ಕೇಸ್ !?
ಬಿಬಿಎಂಪಿ ನೀಡುವ ವಾರ್ ರೂಂ ವರದಿಗೂ, ರಾಜ್ಯದ ಹೆಲ್ತ್ ಬುಲೆಟಿನ್ನಲ್ಲೂ ಅಂಕಿ ಅಂಶಗಳ ವ್ಯತ್ಯಾಸ ಇದ್ದು, ವಾರ್ ರೂಂ ವರದಿ ಪ್ರಕಾರ ಇಂದಿಗೆ ನಗರದ ಒಟ್ಟು ಕೊರೊನಾ ಪಾಸಿಟಿವ್ ಸಂಖ್ಯೆ 2538 ಆಗಿದೆ.