ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಇಂದು 2963 ಮಂದಿಗೆ ಕೊರೊನಾ ಪಾಸಿಟಿವ್​: 25 ಜನರ ಸಾವು - Positive Case Found

ಬೆಂಗಳೂರು ನಗರದಲ್ಲಿ ಇಂದು ಮಹಾಮಾರಿ ಕೊರೊನಾದಿಂದ 25 ಮಂದಿ ಮೃತಪಟ್ಟ ವರದಿಯಾಗಿದೆ. ಇನ್ನು ಹೆಚ್ಚು ಜನ ಸೇರುವ ಜಾಗಗಳಲ್ಲಿ ಸೋಂಕಿನ ಲಕ್ಷಣ ಇರುವವರಿಗೆ ಅನುಕೂಲವಾಗುವಂತೆ ಉಚಿತವಾಗಿ ರ‍್ಯಾಪಿಡ್​ ಆಂಟಿಜನ್ ಪರೀಕ್ಷೆ ಮಾಡಲಾಗುತ್ತಿದೆ.

2963 Corona Positive Case Found In Bangaluru City Today
ನಗರದಲ್ಲಿಂದು 2963 ಕೊರೊನಾ ಪಾಸಿಟಿವ್​ ದೃಢ; 25 ಜನರ ಸಾವು

By

Published : Sep 4, 2020, 8:14 PM IST

ಬೆಂಗಳೂರು: ನಗರದಲ್ಲಿ ಇಂದು 2963 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು 25 ಮಂದಿ ಮೃತಪಟ್ಟ ವರದಿಯಾಗಿದೆ. ಒಟ್ಟು ಈವರೆಗೆ ಮೃತಪಟ್ಟವರ ಸಂಖ್ಯೆ 2091 ಆಗಿದೆ. ಒಟ್ಟು ಕೋವಿಡ್ ಪಾಸಿಟಿವ್ ಸಂಖ್ಯೆ 141664ಕ್ಕೆ ಏರಿಕೆಯಾಗಿದೆ.

ಉಚಿತ ರ‍್ಯಾಪಿಡ್​ ಆಂಟಿಜನ್ ಪರೀಕ್ಷೆ

ಇಂದು 1732 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 97926 ಮಂದಿ ಚೇತರಿಸಿಕೊಂಡಿದ್ದಾರೆ. 41646 ಸಕ್ರಿಯ ಪ್ರಕರಣಗಳಿವೆ. ಒಟ್ಟು 276 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಕೆ.ಆರ್ ಮಾರುಕಟ್ಟೆ ಸೇರಿದಂತೆ ಹೆಚ್ಚು ಜನ ಸೇರುವ ಜಾಗಗಳಲ್ಲಿ ಸೋಂಕಿನ ಲಕ್ಷಣ ಇರುವವರಿಗೆ ಅನುಕೂಲವಾಗುವಂತೆ ಕೆ.ಆರ್. ಮಾರುಕಟ್ಟೆ ಬಸ್ ನಿಲ್ದಾಣದಲ್ಲಿ ಉಚಿತವಾಗಿ ರ‍್ಯಾಪಿಡ್​ ಆಂಟಿಜನ್ ಪರೀಕ್ಷೆ ಮಾಡಲಾಗುತ್ತಿದೆ.

ಉಚಿತ ರ‍್ಯಾಪಿಡ್​ ಆಂಟಿಜನ್ ಪರೀಕ್ಷೆ

ABOUT THE AUTHOR

...view details