ಬೆಂಗಳೂರು :ಮುಖ್ಯಮಂತ್ರಿ ಯಡಿಯೂರಪ್ಪ ವರ್ಗಾವಣೆ ಪರ್ವ ಮುಂದುವರೆಸಿದ್ದಾರೆ. ಮತ್ತೆ 11 ಐಎಎಸ್ ಮಂದಿ ಮತ್ತು 11 ಐಪಿಎಸ್ ಅಧಿಕಾರಿಗಳ ಜೊತೆಗೆ 26 ಡಿವೈಎಸ್ಪಿ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ ಯಡಿಯೂರಪ್ಪ ಸರ್ಕಾರ.
ವಿಪುಲ್ ಕುಮಾರ್ - ಐಜಿಪಿ ದಕ್ಷಿಣ ವಲಯ ಮೈಸೂರು, ರಾಮ್ ನಿವಾಸ್ ಸಫೆಟ್-ಹಾಸನ ಎಸ್ಪಿ, ಪಾಟೀಲ್ ವಿನಾಯಕ್ ವಸಂತರಾವ್-ಎಸ್ಪಿ ಕಲಬುರಗಿ, ಶಿವಪ್ರಕಾಶ್ ದೇವರಾಜ್ ಎಸ್ಪಿ, ಎಂ.ಎನ್.ನಾಗರಾಜ್- ಡಿಐಜಿ ಕೇಂದ್ರ ಕಚೇರಿ ಬೆಂಗಳೂರು, ಎಂ ಬಿ ಬೋರಲಿಂಗಯ್ಯ- ಎಸ್ಪಿ ಬೆಂಗಳೂರು ರೈಲ್ವೇಸ್ ಹಾಗೂ ಸಂಜೀವ್ ಎಂ.ಪಾಟೀಲ್- ಎಸ್ಪಿ ಬೆಂಗಳೂರು ನಗರ ಆಂತರಿಕ ವಿಭಾಗಕ್ಕೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 20ಕ್ಕಿಂತ ಹೆಚ್ಚು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ವರ್ಗಾವಣೆಗೊಂಡಿದ್ದ ಅಧಿಕಾರಿಗಳೆಲ್ಲರೂ ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದರು. ಇದೀಗ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು ಅವರು ವರ್ಗಾವಣೆಗೊಳಿಸಿ ಕೂಡಲೇ ನಿಯುಕ್ತಿಗೊಂಡು ಪಾಲನಾ ವರದಿ ನೀಡಬೇಕೆಂದು ಆದೇಶಿಸಿದ್ದಾರೆ.
11 ಐಎಎಸ್ ಅಧಿಕಾರಿಗಳ ವರ್ಗಾವಣೆ,ಯಾರು ಎಲ್ಲಿಗೆ.. ?
- ಜಿ.ಕಲ್ಪನಾ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ
- ಡಾ.ಎನ್.ಮಂಜುಳಾ- ಎಂಡಿ, ಕೆಪಿಟಿಸಿಎಲ್
- ಡಾ.ಶಾಮಲಾ ಇಕ್ಬಾಲ್- ಆಯುಕ್ತರು, ನಾಗರಿಕ ಪೂರೈಕೆ ಹಾಗೂ ಆಹಾರ ಇಲಾಖೆ
- ಜಿ.ಎನ್.ಶಿವಮೂರ್ತಿ-ಡಿಸಿ, ಬೆಂಗಳೂರು ನಗರ
- ಪಿ.ಎನ್.ರವೀಂದ್ರ-ಡಿಸಿ, ಬೆಂಗಳೂರು ಗ್ರಾಮಾಂತರ
- ಪೆದ್ದಪ್ಪಯ್ಯ.ಆರ್.ಎಸ್.- ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ
- ಮಹಂತೇಶ್ ಬೀಳಗಿ- ಡಿಸಿ, ದಾವಣಗೆರೆ
- ಎಂ.ಎಸ್.ಅರ್ಚನಾ- ಡಿಸಿ, ರಾಮನಗರ
- ಜಿ.ಜಗದೀಶ- ಡಿಸಿ, ಉಡುಪಿ
- ಕೆ.ಲೀಲಾವತಿ- ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಡಾ.ಅರುಂದತಿ ಚಂದ್ರಶೇಖರ್- ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ