ಬೆಂಗಳೂರು: ರಾಜ್ಯಾದ್ಯಂತ ಭಾರಿ ಕೋಲಾಹಲ ಸೃಷ್ಟಿ ಮಾಡಿರುವ ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಇದೀಗ ಮತ್ತೆ ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಗರದ ಎಸಿಪಿಗಳು ಹಾಗೆ ಇನ್ಸ್ಪೆಕ್ಟರ್ಗಳು ಸೇರಿ ಒಟ್ಟು 254 ಪೊಲೀಸರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ನಿನ್ನೆ ಕೆಲ ಇನ್ಸ್ಪೆಕ್ಟರ್ಗಳ ಹಾಗೂ ಎಡಿಜಿಪಿಗಳ ವಿಚಾರಣೆ ಮಾಡಲಾಗಿತ್ತು.
ಟೆಲಿಪೋನ್ ಕದ್ದಾಲಿಕೆ ಪ್ರಕರಣ: ಎಸಿಪಿ, ಇನ್ಸ್ಪೆಕ್ಟರ್ ಸೇರಿ ಒಟ್ಟು 254 ಸಿಬ್ಬಂದಿಗೆ ನೋಟಿಸ್
ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಇದೀಗ ಎಸಿಪಿ ಸೇರಿದಂತೆ ಒಟ್ಟು 254 ಮಂದಿಗೆ ನೋಟಿಸ್ ಜಾರಿಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಪೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಸಿಬಿಐ ತನಿಖೆಗೆ ಇಳಿದಿತ್ತು. ಈ ವೇಳೆ ರಾಜಾಕಾರಣಿಗಳು, ಸ್ವಾಮೀಜಿಗಳ ಫೋನ್ ಕದ್ದಾಲಿಕೆಯಾಗಿರುವ ವಿಚಾರ ಬಹಿರಂಗವಾಗಿತ್ತು. ಹೀಗಾಗಿ ಸಿಬಿಐ ಒಂದು ವರ್ಷದಲ್ಲಿ ನಡೆದಿರುವ ಎಲ್ಲ ಠಾಣೆಗಳ ಪೋನ್ ಟ್ಯಾಪ್ ಬಗ್ಗೆ ಮಾಹಿತಿ ಪಡೆದುಕೊಂಡು ಮೊದಲು 54 ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ಜಾರಿಮಾಡಿ ಇದೀಗ ಎರಡನೇ ಹಂತದ ವಿಚಾರಣೆಗೆ ಎಸಿಪಿ ಸೇರಿ ಒಟ್ಟು 254 ಮಂದಿಗೆ ನೋಟಿಸ್ ಜಾರಿಮಾಡಿದ್ದಾರೆ.
ಮೂರು ದಿನಗಳಲ್ಲಿ ಸಿಬಿಐನ ವಿವಿಧ ತಂಡಗಳು ಕೆ.ಕೆ ಗೆಸ್ಟ್ ಹೌಸ್ನಲ್ಲಿ ಪೊಲೀಸರ ವಿಚಾರಣೆ ನಡೆಸುತ್ತಿದ್ದು, ಇನ್ಸ್ಪೆಕ್ಟರ್ಗಳು ಹಾಗೂ ಎಸಿಪಿಗಳ ಮಾಹಿತಿ ಪಡೆದು ನಂತರ ಅಗತ್ಯ ಬಿದ್ದರೆ ಎಡಿಜಿಪಿ ಅಲೋಕ್ ಕುಮಾರ್ ಅವರನ್ನ ಮತ್ತೆ ಪುನಃ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.