ಕರ್ನಾಟಕ

karnataka

ETV Bharat / state

ಬೆಂಗಳೂರು ಸಂಚಾರ ವಿಭಾಗಕ್ಕೆ ₹17.32 ಕೋಟಿ ಅನುದಾನ: ಶೀಘ್ರದಲ್ಲೇ 125 ಜಂಕ್ಷನ್​ ನಿರ್ಮಾಣ - Bangalore Traffic Division

ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕಾಗಿ ಅನುದಾನ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ₹17.32 ಕೋಟಿ ಅನುದಾನ ಒದಗಿಸಿದೆ.

ಬೆಂಗಳೂರು ಸಂಚಾರ ವಿಭಾಗಕ್ಕೆ ₹17.32 ಕೋಟಿ ಅನುದಾನ: ಶೀಘ್ರದಲ್ಲೇ 125 ಜಂಕ್ಷನ್​ ನಿರ್ಮಾಣ

By

Published : Aug 23, 2019, 8:35 PM IST

ಬೆಂಗಳೂರು:ದಿನೇ ದಿನೆ ವಾಹನಗಳ ಸಂಖ್ಯೆ ಏರಿಕೆಯ ಪರಿಣಾಮ ನಗರದಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಿಂದಾಗಿ ಅಪಘಾತ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕಾಗಿ ಅನುದಾನ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ₹17.32 ಕೋಟಿ ಅನುದಾನ ಒದಗಿಸಿದೆ.

2017-18ರಲ್ಲಿ ಬಿಬಿಎಂಪಿ ಟ್ರಾಫಿಕ್​ ಇಂಜಿನಿಯರಿಂಗ್​ ಸೆಲ್​ (ಟಿಇಸಿ) ವಿಭಾಗಕ್ಕೆ ಸರ್ಕಾರ ₹ 30 ಕೋಟಿ ಮೀಸಲಿಟ್ಟಿತ್ತು. ಈ ವೇಳೆ ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬಿ-ಟ್ರ್ಯಾಕ್​ ಯೋಜನೆಯಡಿ ಅನುದಾನ ನೀಡುವಂತೆ ನಗರಾಭಿವೃದ್ಧಿ ಪ್ರಸ್ತಾವನೆ ಸಲ್ಲಿಸಿತ್ತು. ಹೊಸದಾಗಿ ಸಂಚಾರ ದೀಪಗಳ ಅಳವಡಿಕೆ, ಸಿಸಿಟಿವಿ ಕ್ಯಾಮರಾ ಹಾಗೂ ಅಗತ್ಯ ಕಡೆಗಳಲ್ಲಿ ರಸ್ತೆ ಉಬ್ಬು ಹಾಕುವುದು ಸೇರಿದಂತೆ ಸುಗಮ ಸಂಚಾರಕ್ಕೆ ಬೇಕಾದ ಅಂಶಗಳನ್ನು ಪ್ರಸ್ತಾವನೆ ಸೂಚಿಸಿತ್ತು.

ಇದರಂತೆ ನಗರಾಭಿವೃದ್ಧಿ ಇಲಾಖೆಯು ಲಭ್ಯವಿರುವ ₹ 30 ಕೋಟಿ ಹಣದಲ್ಲಿ ₹ 12 ಕೋಟಿ ಟ್ರಾಫಿಕ್​ ಸಿಗ್ನಲ್​ ಅಳವಡಿಕೆಗಾಗಿ ಹಾಗೂ ₹ 5.32 ಕೋಟಿ ರೋಡ್​ ಸ್ಟಡ್ಸ್​ ಅಥವಾ ಕ್ಯಾಟ್​ ಐಸ್ಸ್ ₹ 5.32 ಕೋಟಿ ನಿರ್ಮಾಣ ಸೇರಿದಂತೆ ಒಟ್ಟು ₹ 17.32 ಕೋಟಿ ಅನುದಾನವನ್ನು ನೇರವಾಗಿ ನಗರ ಸಂಚಾರ ವಿಭಾಗಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.

ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸ್​ ಆಯುಕ್ತರು ಕಾರ್ಯೋನ್ಮುಖವಾಗಿದ್ದು, ಮೊದಲ ಆದ್ಯತೆಯಾಗಿ 125 ಜಂಕ್ಷನ್​ ನಿರ್ಮಾಣ, ಟ್ರಾಫಿಕ್​ ಸಿಗ್ನಲ್​ ಲೈಟ್​ ಅಳವಡಿಕೆಗಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ABOUT THE AUTHOR

...view details