ಕರ್ನಾಟಕ

karnataka

ETV Bharat / state

ಸಂಬಳ ನೀಡದೆ ಸತಾಯಿಸುತ್ತಿರುವ ಕಂಪನಿ; ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರ ಪ್ರತಿಭಟನೆ - ಕೊನೋರಿಯಾ ಪ್ಲಾಸ್ಕೆಮ್ ಲಿಮಿಟೆಡ್ ‌ಕಂಪನಿ

ಲಾಕ್​ಡೌನ್ ಸಮಯದಲ್ಲಿ ಸಂಬಳ ನೀಡದೆ ಮಾಲೀಕರು ಸತಾಯಿಸುತ್ತಿದ್ದು, ಕಂಪನಿಯ ಕೂಲಿ ಕಾರ್ಮಿಕರನ್ನು ಕೈ ಬಿಟ್ಟು ಗುತ್ತಿಗೆ ಕಾರ್ಮಿಕರ ಬಳಿ ಕೆಲಸ ಮಾಡಿಸುವ ಸಂಚು ರೂಪಿಸಿದ್ದಾರೆಂದು ಕಾರ್ಮಿಕರು ಆರೋಪ ಮಾಡುತ್ತಿದ್ದಾರೆ.

Workers protest
ಕಾರ್ಮಿಕರ ಪ್ರತಿಭಟನೆ

By

Published : Jul 1, 2020, 7:30 PM IST

ಆನೇಕಲ್:ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಕಂಪನಿಯ ಅಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಆನೇಕಲ್​ನ ಬೊಮ್ಮಸಂದ್ರದ ಕೊನೋರಿಯಾ ಪ್ಲಾಸ್ಕೆಮ್ ಲಿಮಿಟೆಡ್ ‌ಕಂಪನಿಯ ಕಾರ್ಮಿಕರಿಂದ ಧರಣಿ ನಡೆಯಿತು. ಮಹಿಳೆಯರಿಗೆ ಅವ್ಯಾಚ್ಯ ಶಬ್ದಗಳಿಂದ ಹೆಚ್ಆರ್ ನಿಂದನೆ ಮಾಡುತ್ತಿದ್ದಾರೆಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಸಂಬಳ ನೀಡದೆ ಮಾಲೀಕರು ಸತಾಯಿಸುತ್ತಿದ್ದು, ಕಂಪನಿಯ ಕೂಲಿ ಕಾರ್ಮಿಕರನ್ನು ಕೈ ಬಿಟ್ಟು ಗುತ್ತಿಗೆ ಕಾರ್ಮಿಕರ ಬಳಿ ಕೆಲಸ ಮಾಡಿಸುವ ಸಂಚು ರೂಪಿಸಿದ್ದಾರೆಂದು ಕಾರ್ಮಿಕರು ಆರೋಪ ಮಾಡುತ್ತಿದ್ದಾರೆ.

ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಕೆಲಸ ಮಾಡಲು ಒತ್ತಾಯ ಮಾಡುತ್ತಿದ್ದಾರೆ. ಸಂಬಳ ನೀಡಿ ಹಾಗೂ ಸರಿಯಾದ ರೀತಿಯ ಕೆಲಸ ನೀಡಿ ಎಂದು ಕೇಳಿದ್ದಕ್ಕೆ ಮಾನಸಿಕ ಹಾಗು ದೈಹಿಕ ಕಿರುಕುಳವನ್ನು ಕಂಪನಿ‌ ಎಚ್ಆರ್ ನೀಡುತ್ತಿದ್ದಾರೆಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ABOUT THE AUTHOR

...view details