ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಪ್ರದೇಶದಲ್ಲಿ ಅಪರಿಚಿತ ಡ್ರೋನ್ ಹಾರಾಟ ಮಾಡಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಪರಿಚಿತ ಡ್ರೋನ್ ಹಾರಾಟವನ್ನು ಪತ್ತೆ ಮಾಡಲು ತನಿಖೆಯನ್ನು ಆರಂಭಿಸಲಾಗಿದೆ.
ರನ್ ವೇ ಪ್ರದೇಶದಿಂದ 6 ನಾಟಿಕಲ್ ದೂರದಲ್ಲಿ ಡ್ರೋನ್ ಹಾರಾಟ ಕಂಡು ಬಂದಿದೆ. ಡ್ರೋನ್ ಹಾರಾಟ ಕಂಡು ಬಂದ ತಕ್ಷಣವೇ ವಿಮಾನದ ಪೈಲಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತ ಸಾಕಷ್ಟು ಭದ್ರತೆ ಇದ್ದರೂ ಅಪರಿಚಿತ ಡ್ರೋನ್ ಹಾರಾಟ ಕೆಲಕಾಲ ಆತಂಕದ ಉಂಟುಮಾಡಿತ್ತು. ಅಪರಿಚಿತ ಡ್ರೋನ್ ಪತ್ತೆ ಮಾಡುವ ಕಾರಣಕ್ಕೆ ಪೊಲೀಸರಿಗೆ ದೂರು ಸಹ ನೀಡಲಾಗಿದ್ದು, ತನಿಖೆ ಪ್ರಾರಂಭವಾಗಿದೆ.
ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ತೆರಳುತ್ತಿದ್ದವನ ಬಂಧನ:ಇತ್ತೀಚಿಗೆ, ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ತೆರಳುತ್ತಿದ್ದವನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದರು. ನೇಪಾಳ ಮೂಲದ ಉತ್ತಮ್ ಹಮಾಲ್ ಬಂಧಿತ ಆರೋಪಿ. ಬಂಧಿತ ಉತ್ತಮ್ ಹಮಾಲ್ ಬೆಂಗಳೂರಿನಿಂದ ಬ್ಯಾಂಕಾಕ್ಗೆ ತೆರಳುತ್ತಿದ್ದ. ನೇಪಾಳ ಮೂಲದವನಾಗಿದ್ದರು ಕೇರಳ ಮೂಲದವನು ಎಂದು ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡಿದ್ದ. ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಬ್ಯಾಂಕಾಕ್ಗೆ ಹಾರಲು ಯತ್ನ ನಡೆಸಿದ್ದ.