ಕರ್ನಾಟಕ

karnataka

ETV Bharat / state

ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿದೆ: ವಿ.ಸೋಮಣ್ಣ - ವಸತಿ ಸಚಿವ ವಿ ಸೋಮಣ್ಣ

''ಕಳೆದ ಸರ್ಕಾರದ ವಸತಿ ಸಚಿವರು ಸೂರ್ಯನಗರಕ್ಕೆ ಬರಲಿಲ್ಲ, ಬಂದರೂ ಸುತ್ತಲೂ ಇರುವ ಜಮೀನುಗಳ ಮೇಲೆ ಕಣ್ಣುಹಾಯಿಸಿ ಹೋದರು. ನಾನು ಅಂತಹ ಹಲ್ಕಾ ಕೆಲಸ ಮಾಡಿಲ್ಲ'' ಎಂದು ವಸತಿ ಸಚಿವ ವಿ ಸೋಮಣ್ಣ ಕಿಡಿಕಾರಿದರು.

Housing Minister V Somanna
ವಸತಿ ಸಚಿವ ವಿ ಸೋಮಣ್ಣ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

By

Published : Mar 7, 2023, 10:22 PM IST

Updated : Mar 8, 2023, 12:57 PM IST

ಆನೇಕಲ್ ತಾಲೂಕು ಚಂದಾಪುರದ ಸೂರ್ಯನಗರದಲ್ಲಿ ಬಡೆದ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ ಸೋಮಣ್ಣ ಮಾತನಾಡಿದರು.

ಬೆಂಗಳೂರು: ''ಕರ್ನಾಟಕ ಗೃಹ ಮಂಡಳಿಯ ಇತಿಹಾಸದಲ್ಲೇ ನೆನಪಿಡಬಹುದಾದ ಕಾರ್ಯಗಳನ್ನು ನನ್ನ ಅವಧಿಯಲ್ಲಿ ಅಧಿಕಾರಿ, ಸಿಬ್ಬಂದಿಯ ನೆರವಿನಿಂದ ಮಾಡಿದ್ದೇನೆ. ಈ ಹಿಂದಿನ ಯಾವ ವಸತಿ ಸಚಿವರೂ ಇಲ್ಲಿಗೆ ಬರಲಿಲ್ಲ. ಬಂದರೂ ಸೂರ್ಯನಗರದ ಸುತ್ತಲಿನ ಜಮೀನಿನ ಮೇಲೆ ಕಣ್ಣುಹಾಕದ ಹೋದವರೇ, ನಾನು ಅಂತಹ ಕೆಲಸಕ್ಕೆ ಕೈಹಾಕಿಲ್ಲ'' ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದರು.

ಆನೇಕಲ್ ತಾಲೂಕು ಚಂದಾಪುರದ ಸೂರ್ಯನಗರ ಮೊದಲ ಹಂತದಲ್ಲಿ ಸೂರ್ಯನಗರದಲ್ಲಿ 136 ಕೋಟಿ ವೆಚ್ಚದ ವಾಣಜ್ಯ ಸಂಕೀರ್ಣದ 40 ಅಂಗಡಿಗಳ, 4 ಮಲ್ಟಿ ಪ್ಲೆಕ್ಸ್ ಸಿನಿಮಾ ಮಂದಿರ ಹಾಗು ಪಾರ್ಕಿಂಗ್ ಯುಕ್ತ ವಾಣಿಜ್ಯ ಮಂಡಳಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ನಿಮ್ಮೆಡೆಗೆ ನಾನೇ ಖುದ್ದು ಧೈರ್ಯವಾಗಿ ಬಂದಿದ್ದೇನೆ. ತುಸು ಸಹಕರಿಸಿ ಸೇವೆಗೆ ಅವಕಾಶ ಮಾಡಿಕೊಡಿ ಎಂದು ನೆರೆದಿದ್ದ ಚಂದಾಪುರ ನಿವಾಸಿಗಳ ಪದೇ ಪದೆ ಕೇಳುತ್ತಿದ್ದ ಪ್ರಶ್ನೆಗಳಿಗೆ ತುಸು ಖಾರದಿಂದಲೇ ವಸತಿ ಸಚಿವ ವಿ ಸೋಮಣ್ಣ ಉತ್ತರಿಸಿದರು.

136 ಕೋಟಿ ರೂ. ಬಂಡವಾಳ ಹೂಡಿ ಅಭಿವೃದ್ಧಿಗೆ ಚಾಲನೆ:''ಆಗೊಮ್ಮೆ, ಈಗೊಮ್ಮೆ, ಸೂರ್ಯನಗರಕ್ಕೆ ಬಂದರೆ ಬಿಕೋ ಎನ್ನುವುದನ್ನು ಮನಗಂಡಿದ್ದೆ, ಪಕ್ಕದ ಚಂದಾಪುರವೇ ಬೆಳೆಯುವುದನ್ನು ಕಂಡು 136 ಕೋಟಿ ಬಂಡವಾಳ ಹೂಡಿ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ ಎಂದರು. 20X30 ಅಡಿಯ ಮೂರ್ನಾಲ್ಕು ಅಂತಸ್ತಿನ 2,500 ಮನೆಗಳನ್ನು ಸಾಮಾನ್ಯ ಬಡಜನರಿಗೆ ವಸತಿ ಕಲ್ಪಿಸುವ ಕೆಲಸವನ್ನು ನಾನು ಮತ್ತೆ ಗೆದ್ದು ಬಂದರೆ ನೆರವೇರಿಸಿಕೊಡುವ ಭರವಸೆಯನ್ನು ನೀಡಿದರು. 20,000 ಚದರ ಅಡಿ ವಿಸ್ತೀರ್ಣದ ಸೂರ್ಯನಗರ ಪೊಲೀಸ್ ಠಾಣೆಗೆ ಅರ್ದದಷ್ಟು ಜಾಗ ನೀಡಿ ಉಳಿದ ಜಾಗವನ್ನು ಹರಾಜು ನೀಡಿ ಗೃಹ ಮಂಡಳಿ ಸಂಸ್ಥೆ ಬೆಳೆಯಲು ಸಹಕರಿಸಲಾಗುವುದು. ಆಸ್ಪತ್ರೆ, ಶಾಲೆ, ಅಂಗನವಾಡಿಗಳಿಗೆ ಆದ್ಯತೆ ನೀಡಿ‌ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು'' ಎಂದು ತಿಳಿಸಿದರು.

''ಡಿ.ದೇವರಾಜ್ ಅರಸು ನಿರ್ಮಿಸಿದ ಕರ್ನಾಟಕ ಗೃಹ ಮಂಡಳಿ 50 ವರ್ಷಗಳಲ್ಲಿ 55,000 ಮನೆ ನಿರ್ಮಾಣವನ್ನಷ್ಟೇ ಮಾಡಿತ್ತು. ಆದರೆ, ಕೇವಲ 9 ವರ್ಷಗಳಲ್ಲಿ ನನ್ನ ಅವಧಿಯಲ್ಲಿ 65,000 ವಸತಿ ಹಂಚಿಕೆ ಮಾಡಿದ್ದೇನೆ ಎಂದ ಅವರು, ರೈತರಿಗೂ ಸ್ಪಂದಿಸಿ ಸಂಸ್ಥೆಗೂ ನಷ್ಟವಾಗದ ರೀತಿಯಲ್ಲಿ ವಸತಿ ಕಲ್ಪಿಸುವ ಕೆಲಸ ಈಗಿನ ಸರ್ಕಾರ ಮಾಡಿದೆ'' ಎಂದು ವಿ ಸೋಮಣ್ಣ ಸಮರ್ಥಿಸಿಕೊಂಡರು.

''ರಾಜ್ಯಾದ್ಯಂತ 32 ಜಿಲ್ಲೆಗಳಲ್ಲಿ ಕೆಎಚ್‌ಬಿ ಮೂಲ ಸೌಲಭ್ಯಗಳನ್ನೊಳಗೊಂಡ ಬಡಾವಣೆಗಳನ್ನು ನಿರ್ಮಿಸಿ ಬಡಜನತೆ ಹಾಗೂ ಎಲ್ಲ ವರ್ಗದವರ ಸ್ವಂತ ಮನೆಯ ಕನಸನ್ನು ನನಸಾಗಿಸುತ್ತಿದೆ. ಇದಕ್ಕಾಗಿ ಭೂಮಿ ನೀಡಿದ ರೈತರು, ನಿವೇಶನ ಖರೀದಿದಾರರು ಹಾಗೂ ವಸತಿ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು, ನಮ್ಮ ಸರ್ಕಾರ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದೆ. ರಾಜ್ಯದ ಮಹಾಜನತೆ ಮತ್ತೆ ಪೂರ್ಣ ಬಹುಮತದ ಸರ್ಕಾರಕ್ಕೆ ಮತ್ತೆ ಆಶೀರ್ವಾದ ಮಾಡುತ್ತಾರೆ'' ಎಂದರು.

ಅಧಿಕಾರಿಗಳಿಗೆ ಎಚ್ಚರಿಕೆ: ''ಗೃಹ ಮಂಡಳಿಯ ಯೋಜನೆಗಳಿಗಾಗಿ ರೈತರು ಹಾಗೂ ಗ್ರಾಮಸ್ಥರು ತ್ಯಾಗ ಮಾಡಿದ್ದು, ಬಡಾವಣೆಯ ನಿವಾಸಿಗಳು ಮೂಲ ಸೌಕರ್ಯಕ್ಕಾಗಿ ಒತ್ತಾಯಿಸುವುದು ಅವರ ಹಕ್ಕಾಗಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನಿವೇಶನ, ಪೊಲೀಸ್ ಠಾಣೆಗೆ ಉಚಿತ, ಶಾಲೆ, ಅಂಗನವಾಡಿ, ಆಸ್ಪತ್ರೆ, ಮುಂತಾದವುಗಳಿಗೆ ಭೂಮಿ ಮೀಸಲಿಟ್ಟು ರಸ್ತೆ, ಬೀದಿ ದೀಪ, ಕುಡಿಯುವ ನೀರು ಮುಂತಾದವುಗಳನ್ನು ಲೋಪವಿಲ್ಲದೇ ಒದಗಿಸಿಬೇಕು. ಸುತ್ತಮುತ್ತಲ ಹಳ್ಳಿಗಳಿಗೂ ಮೂಲ ಸೌಕರ್ಯ ನೀಡುವ ಜೊತೆಗೆ ಬಡಾವಣೆಯಲ್ಲಿ ಹಾದು ಹೋಗುವ ರಾಜಕಾಲುವೆ ತೆರವು, ಕೆರೆಗಳ ಸಂರಕ್ಷಣೆ, ಗಿಡ ಮರಗಳನ್ನು ಬೆಳೆಸುವುದು ಸೇರಿದಂತೆ ಎಲ್ಲ ರೀತಿಯ ಅನುಕೂಲತೆಗಳನ್ನು ಶೀಘ್ರವಾಗಿ ಒದಗಿಸಬೇಕು. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು'' ಎಂದು ಸಚಿವರು ಎಚ್ಚರಿಕೆ ನೀಡಿದರು.

ನಿವಾಸಿಗಳು, ರೈತರು ಹೇಳಿದ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವರು, ಅಧಿಕಾರಿಗಳ ಮೇಲೆ ಗರಂ ಆದರು. ''ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಇಲಾಖೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು. ಉದ್ಯೋಗ ಶಾಶ್ವತವಲ್ಲ ಆದರೆ, ನಾವು ಮಾಡುವ ಕೆಲಸ ಶಾಶ್ವವಾಗಿರಬೇಕು'' ಎಂದರು.

ವೇದಿಕೆಯಲ್ಲಿ ಗೃಹ ಆಯುಕ್ತೆ ಕವಿತಾ ಮನ್ನಿಕೇರಿ, ಮುಖ್ಯ ಅಭಿಯಂತರ ಶರಣಪ್ಪ ಸುಲಗುಂಟೆ, ಕಾರ್ಯದರ್ಶಿ ಸಿದ್ದಲಿಂಗಪ್ಪ, ಅಭಿಯಂತರ ಲೋಕೇಶ್‌ಬಾಬು, ಲೋಕೇಶ್, ಜಗದೀಶ್, ಬೋಪಣ್ಣ, ಕೊಟ್ರೇಶ್, ಮುಖಂಡರಾದ ಕೆ. ಶಿವರಾಂ, ಜಯಣ್ಣ, ಮಂಡಲ ಬಿಜೆಪಿ ಅಧ್ಯಕ್ಷ ಬಿಬಿಐ ರಾಜು, ನಾರಾಯಣಪ್ಪ, ನಾಗೇಂದ್ರ ಇತರರಿದ್ದರು.

ಇದನ್ನೂ ಓದಿ:ನಗರದಲ್ಲಿ ನಾಲ್ಕು ನೂತನ ಸಂಚಾರ ಠಾಣೆಗಳಿಗೆ ಸಿಎಂ ಚಾಲನೆ

Last Updated : Mar 8, 2023, 12:57 PM IST

ABOUT THE AUTHOR

...view details