ಕರ್ನಾಟಕ

karnataka

ETV Bharat / state

ಗಾರ್ಮೆಂಟ್ಸ್‌ ಉದ್ಯೋಗ ಕಡಿತ, ಜೀವನ ನಡೆಸಲು ದುಡ್ಡಿಲ್ಲ; ನೇಣಿಗೆ ಕೊರಳೊಡ್ಡಿದ್ಲು ಯುವತಿ - ಗಾರ್ಮೆಂಟ್ಸ್

ಗಾರ್ಮೆಂಟ್ಸ್ ನವರು ಬೇಡಿಕೆ ಇಲ್ಲವೆಂದು ಕೆಲಸದಿಂದ ತೆಗೆದು ಹಾಕಿದ್ದು, ಜೀವನ ನಡೆಸಲಾಗದೆಂದು ಮನನೊಂದು ಯುವತಿ ನೇಣಿಗೆ ಶರಣಾಗಿರುವ ಘಟನೆ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

ಯುವತಿ ಆತ್ಮಹತ್ಯೆ

By

Published : Sep 21, 2019, 8:39 PM IST

ಆನೇಕಲ್:ಕೆಲಸ ಇಲ್ಲದೆ ಜೀವನ ನಡೆಸಲಾಗದೆ ಯುವತಿ ಮನನೊಂದು ಬುದ್ದಿಮಾಂದ್ಯ ಅಣ್ಣನ ಎದುರಲ್ಲಿಯೇ ನೇಣಿಗೆ ಶರಣಾಗಿರುವ ಮನಕಲುಕುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

ಜೀವನ ನಡೆಸಲಾಗದೆ ಯುವತಿ ಆತ್ಮಹತ್ಯೆ

ಅತ್ತಿಬೆಲೆಯ ನಾಗಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಮೃತಪಟ್ಟ ಯುವತಿಯಾಗಿದ್ದು, ಓರ್ವ ತಂಗಿ, ತಾಯಿ ಹಾಗೂ ಬುದ್ದಿಮಾಂದ್ಯ ಅಣ್ಣನ ಜೊತೆ ಜೀವನ ಸಾಗಿಸುತ್ತಿದ್ದರು. ಮನೆಯ ಹಿರಿಯ ಮಗಳಾದ ಕಾರಣ ಕುಟುಂಬದ ಜವಾಬ್ದಾರಿ ಸಂಪೂರ್ಣ ಈ ಯುವತಿಯ ಮೇಲಿತ್ತು. ಈಕೆ ಖಾಸಗಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು.

ಆದರೆ ಕಳೆದ ವಾರ ಗಾರ್ಮೆಂಟ್ಸ್ ನವರು ಬೇಡಿಕೆ ಇಲ್ಲವೆಂದು ಕೆಲಸದಿಂದ ತೆಗೆದು ಹಾಕಿದ್ದು ಕೆಲಸವಿಲ್ಲದೆ ಜೀವನ ನಡೆಸಲಾಗದೆ ಮನನೊಂದಿದ್ದಾರೆ. ಮನೆಗೆ ಬೇಕಾದ ದಿನಸಿ ತರಲು ತಾಯಿ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಬುದ್ದಿಮಾಂದ್ಯ ತಮ್ಮನ ಎದುರಲ್ಲಿಯೇ ಈ ಯುವತಿ ನೇಣಿಗೆ ಕೊರಳೊಡ್ಡಿದ್ದಾಳೆ.

ಘಟನೆ ಸಂಬಂಧ ಅತ್ತಿಬೆಲೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details