ಕರ್ನಾಟಕ

karnataka

ETV Bharat / state

ಅಮವಾಸ್ಯೆ ದಿನ ಬೈಕ್​​ ಕದಿಯುತ್ತಿದ್ದ ಕಳ್ಳರ ಬಂಧನ - kannada news

ಅಮಾವಾಸ್ಯೆ ದಿನವಷ್ಟೆ ಕಳ್ಳತನ ಮಾಡುತ್ತಿದ್ದ ಬೈಕ್ ಕಳ್ಳರನ್ನು ದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಅಮವಾಸ್ಯೆ ದಿನ ಬೈಕ್ ಕದಿಯುತ್ತಿದ್ದ ಕಳ್ಳರ ಬಂಧನ

By

Published : Mar 14, 2019, 5:43 PM IST

ನೆಲಮಂಗಲ : ಅಮಾವಾಸ್ಯೆ ದಿನ ಬೈಕ್ ಕದಿಯುತ್ತಿದ್ದ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ದಾಬಸ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಮತ್ತು ತುಮಕೂರು ಸುತ್ತಮುತ್ತ ಬೈಕ್ ಕದಿಯುತ್ತಿದ್ದರು. ಅಮಾವಾಸ್ಯೆ ದಿನವಷ್ಟೆ ಕಳ್ಳತನ ಮಾಡುತ್ತಿದ್ದರು. ಮನೆಯ ಮುಂದೆ ನಿಲ್ಲಿಸಿದ್ದ ಬೈಕ್​ಗಳನ್ನು ಕದ್ದಿಯುತ್ತಿದ್ದ ಕಳ್ಳರು, ಅಮಾವಾಸ್ಯೆಯ ರಾತ್ರಿಯ ವೇಳೆ ಜನ ಹೆಚ್ಚಾಗಿ ಮನೆಯಿಂದ ಹೊರ ಬರುವುದಿಲ್ಲ. ಇದನ್ನೇ ಬಂಡವಾಳವಾಗಿಸಿ ಬೈಕ್ ಕದ್ದು ಪರಾರಿಯಾಗುತ್ತಿದ್ದರು. ಕದ್ದ ಬೈಕ್​ಗಳನ್ನು ಸ್ನೇಹಿತರ ಮೂಲಕ ಮಾರುತ್ತಿದ್ದರು.

ತುಮಕೂರು ಟೌನ್ ಸೀತಕಲ್ಲು ಗ್ರಾಮದ ಗಣೇಶ್, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ವಿನಯ್ ಕುಮಾರ್ ಬಂಧಿತ ಆರೋಪಿಗಳು. ಅರೋಪಿಗಳಿಂದ 13 ಬೈಕ್ ವಶಕ್ಕೆ ಪಡೆಯಲಾಗಿದೆ.

ಕಳೆದೆರಡು ದಿನದ ಹಿಂದೆ ಅರೋಪಿಗಳಾದ ಗಣೇಶ್ ಮತ್ತು ವಿನಯ್ ಕುಮಾರ್ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ಬೈಕ್ ಕದ್ದು ತುಮಕೂರು ಕಡೆ ತೆರಳುತ್ತಿದ್ದಾಗ ದಾಬಸ್ ಪೇಟೆ ಠಾಣಾ ವ್ಯಾಪ್ತಿಯ ಲಕ್ಕೂರು ಗ್ರಾಮದ ಬಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details