ಕರ್ನಾಟಕ

karnataka

ETV Bharat / state

ಯುಗಾದಿ ಹಬ್ಬದಂದು ಹಿರಿಯರ ಸಮಾಧಿಗೆ ಇಲ್ಲಿ ನಡೆಯುತ್ತೆ ವಿಶೇಷ ಪೂಜೆ! - ವಿಶೇಷ ಆಚರಣೆ

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ಮತ್ತು ಕಚೇರಿ‌ಪಾಳ್ಯದ ಮಧ್ಯ ಭಾಗದಲ್ಲಿ ಬರುವ ಸ್ಮಶಾನ ಯುಗಾದಿ ಹಬ್ಬದಂದು ವಿಶೇಷ ಮೆರುಗು ಪಡೆಯುತ್ತದೆ - ಯುಗಾದಿ ಹಬ್ಬ‌ದಲ್ಲಿ ಸಂಬಂಧಿಕರ ಸಮಾಧಿ‌ಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲಿದೆ-ಹೊಸ ಬಟ್ಟೆ, ಮನೆಯಲ್ಲಿ ಹಬ್ಬಕ್ಕೆಂದು ಮಾಡಿದ ವಿಶೇಷ ಅಡುಗೆ‌ಗಳನ್ನು ಸಮಾಧಿಗೆ ತಂದು ಎಡೆ ಹಾಕುತ್ತಾರೆ.

ಸಮಾಧಿಗೆ ವಿಶೇಷ ಪೂಜೆ

By

Published : Apr 7, 2019, 5:27 AM IST

ಬೆಂಗಳೂರು:ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ವರ್ಷದ ಆರಂಭ. ಯುಗಾದಿ ಬರುವ ಹದಿನೈದು ದಿನದ ಮುನ್ನವೇ ಹಬ್ಬದ ಕಳೆ ಮನೆಯಲ್ಲಿ ಕಾಣಿಸುತ್ತೆ. ಮೈಸೂರು ಮತ್ತು ಬೆಂಗಳೂರು ಕಡೆ ಯುಗಾದಿ ಹಬ್ಬದ ದಿನ ಸಂಬಂಧಿಕರ ಸಮಾಧಿಗಳಿಗೆ ಪೂಜೆ ಮಾಡುವ ವಿಶೇಷ ಆಚರಣೆ ಇದೆ. ಈ ಮೂಲಕ ಹಿರಿಯರ ನಾಮಸ್ಮರಣೆ ಮಾಡುತ್ತಾರೆ.

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ಮತ್ತು ಕಚೇರಿ‌ಪಾಳ್ಯದ ಮಧ್ಯ ಭಾಗದಲ್ಲಿ ಬರುವ ಸ್ಮಶಾನ ಯುಗಾದಿ ಹಬ್ಬದಂದು ವಿಶೇಷ ಮೆರುಗು ಪಡೆಯುತ್ತದೆ. ಸುಣ್ಣ ಬಣ್ಣದ ಜೊತೆಸ್ಮಶಾನದಲ್ಲಿ‌ನ ಸಮಾಧಿಗಳುಕಂಗೊಳಿಸುತ್ತಿರುತ್ತವೆ.

ಯುಗಾದಿ ಹಬ್ಬದಂದು ಸಂಬಂಧಿಕರ ಸಮಾಧಿಗೆ ವಿಶೇಷ ಪೂಜೆ

ಹೌದು, ಯುಗಾದಿ ಹಬ್ಬ‌ದಲ್ಲಿ ಸಂಬಂಧಿಕರ ಸಮಾಧಿ‌ಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲಿದೆ. ಯುಗಾದಿ ದಿನದ ಹಿಂದಿನ ದಿನವೇ ಸ್ಮಶಾನಕ್ಕೆ ಹೋಗಿ ತಮ್ಮ ಹಿರಿಯರ ಸಮಾಧಿಯನ್ನು ಸ್ವಚ್ಛ ಮಾಡುತ್ತಾರೆ. ನಂತರ ಸಮಾಧಿ‌ಗಳಿಗೆ ಸುಣ್ಣ ಬಣ್ಣ ಬಳಿದು ಅಂದವಾಗಿಡುತ್ತಾರೆ.

ಯುಗಾದಿ‌ಯಂದು ಹೊಸ ಬಟ್ಟೆ, ಮನೆಯಲ್ಲಿ ಹಬ್ಬಕ್ಕೆಂದು ಮಾಡಿದ ವಿಶೇಷ ಅಡುಗೆ‌ಗಳನ್ನು ಸಮಾಧಿಗೆ ತಂದು ಎಡೆ ಹಾಕುತ್ತಾರೆ. ಹೆತ್ತವರು ಮತ್ತು ಸಂಬಂಧಿಕರನ್ನು ನೆನೆದು ಪೂಜೆ ಮಾಡುತ್ತಾರೆ. ಈ ಮೂಲಕ ಹಿರಿಯ‌ರ ಆಶೀರ್ವಾದ ಪಡೆಯುತ್ತೇವೆ ಅನ್ನೋದು ಇಲ್ಲಿನವರ ನಂಬಿಕೆ.

ಯುಗಾದಿ ಹಬ್ಬದಂದು ಸಂಬಂಧಿಕರ ಸಮಾಧಿಗೆ ವಿಶೇಷ ಪೂಜೆ

ABOUT THE AUTHOR

...view details