ಕರ್ನಾಟಕ

karnataka

ETV Bharat / state

ತಾಯಿಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ: ಕೆರೆಯಲ್ಲಿ ಶವ ಪತ್ತೆ - ಕೆರೆಯಲ್ಲಿ ಶವ ಪತ್ತೆ

ತಾಯಿಯ ಸಾವಿನಿಂದ ಮನನೊಂದ ಮಗ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದ ಸುಧಾನಗರದಲ್ಲಿ ನಡೆದಿದೆ.

ಲಕ್ಕದಾಸಪ್ಪನ ಕೆರೆಯಲ್ಲಿ  ಶವ ಪತ್ತೆ
son commits suicide after mothers death

By

Published : Sep 19, 2022, 10:59 AM IST

ನೆಲಮಂಗಲ: ತಾಯಿಯ ಸಾವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನೆಲಮಂಗಲದ ಸುಧಾನಗರದಲ್ಲಿ ನಡೆದಿದೆ. ಲಕ್ಕದಾಸಪ್ಪನ ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಶವ ದೊರೆತಿದೆ.

ಬೆಂಗಳೂರಿನ ಬಸವೇಶ್ವರ ನಗರ ನಿವಾಸಿ ರಾಮಕೃಷ್ಣಯ್ಯ ಮೃತ ವ್ಯಕ್ತಿ. ಈತ ಕಳೆದ 10ನೇ ತಾರೀಖಿನಂದು ಅತ್ತೆ ಮನೆಗೆ ಹೋಗಿ 11ಕ್ಕೆ ವಾಪಸ್​ ಬರುತ್ತೇನೆಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೌಡಯ್ಯನಪಾಳ್ಯಕ್ಕೆ ಬಂದಿದ್ದರು. ಆದ್ರೆ ವಾಪಸ್ ಮನೆಗೆ ಹೋಗದ ಕಾರಣ ಮನೆಯವರು ಹುಡುಕಾಟ ನಡೆಸಿದ್ದು, ಇಂದು ಕೆರೆಯಲ್ಲಿ ಮೃತದೇಹ ಕಂಡುಬಂದಿದೆ.

ಲಕ್ಕದಾಸಪ್ಪನ ಕೆರೆಯಲ್ಲಿ ಶವ ಪತ್ತೆ

ಇದನ್ನೂ ಓದಿ:ಕಾಲೇಜಿಗೆ ರಜೆ ಎಂದು ಈಜಲು ಹೋದ್ರು: ಕೆರೆಯ ಕೆಸರಲ್ಲಿ ಸಿಲುಕಿ ವಿದ್ಯಾರ್ಥಿಗಳು ಸಾವು

ಬೆಂಗಳೂರಿನ ಲಿಕ್ಕರ್ ಶಾಪ್​ವೊಂದರಲ್ಲಿ ರಾಮಕೃಷ್ಣಯ್ಯ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ತಾಯಿಯ ಸಾವಿನಿಂದ ಮನನೊಂದಿದ್ದ ಮಗ ಈ ಹಿಂದೆ ಕೂಡ ಮೂರು ಬಾರಿ ಮನೆಯಿಂದ ನಾಪತ್ತೆಯಾಗಿ, ಮರಳಿ ವಾಪಸ್​ ಬಂದಿದ್ದರು. ಈ ಬಾರಿ ಕೂಡ ವಾಪಸ್ ಬರಬಹುದು ಅಂತ ಮನೆಯವರು ತಿಳಿದುಕೊಂಡಿದ್ರು. ಆದರೆ, ರಾಮಕೃಷ್ಣಯ್ಯ ಕೆರೆ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ:ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ABOUT THE AUTHOR

...view details