ಕರ್ನಾಟಕ

karnataka

ETV Bharat / state

ಜನತಾ ಪರಿವಾರದ ಹಳೆ ಜಟ್ಟಿಗಳು ಒಂದಾದರು.. ಗುರು-ಶಿಷ್ಯರಿಂದಾಗಿ ವೀರಪ್ಪ ಮೊಯ್ಲಿ ಖುಷಿ ಖುಷಿಯಾದರು - ಮೈತ್ರಿ ಅಭ್ಯರ್ಥಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರವಾಗಿ ಪ್ರಚಾರ ಮಾಡಲು ದೊಡ್ಡಬಳ್ಳಾಪುರಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಸಿದರು. ಜಂಟಿಯಾಗಿ ಚುನಾವಣಾ ಮೆರವಣಿಗೆ ನಡೆಸಿ ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರ ನಡೆಸಿರು.

ದೇವೇಗೌಡ ಮತ್ತು ಸಿದ್ದರಾಮಯ್ಯ

By

Published : Apr 10, 2019, 11:07 PM IST

ದೊಡ್ಡಬಳ್ಳಾಪುರ :ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿಯಾಗಿದ್ದು, ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸುವ ಮೂಲಕ ಬಿಜೆಪಿಯನ್ನು ಮಣಿಸೋ ತಂತ್ರ ಹೂಡಿವೆ. ಮೈತ್ರಿ ಅಂಗವಾಗಿ ದೇವೇಗೌಡ ಮತ್ತು ಸಿದ್ದರಾಮಯ್ಯ ಜೊತೆಯಾಗಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಗೆಲ್ಲಿಸುವಂತೆ ಮತಯಾಚನೆ ಮಾಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರವಾಗಿ ಪ್ರಚಾರ ಮಾಡಲು ದೊಡ್ಡಬಳ್ಳಾಪುರಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಸಿದ್ದರಾಮಯ್ಯ ಆಗಮಿಸಿದರು. ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಲ್ ಬಳಿ ದೇವೇಗೌಡ ಮತ್ತು ಸಿದ್ದರಾಮಯ್ಯ ಜಂಟಿಯಾಗಿ ಚುನಾವಣಾ ಮೆರವಣಿಗೆ ನಡೆಸಿ ವೀರಪ್ಪಮೊಯ್ಲಿ ಪರವಾಗಿ ಪ್ರಚಾರ ನಡೆಸಿರು.

ದೇವೇಗೌಡ ಮತ್ತು ಸಿದ್ದರಾಮಯ್ಯ ಪ್ರಚಾರ

ಮೈತ್ರಿ ಪಕ್ಷಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡು ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೇವೆ. ನಾವು ಈಗ ಒಂದಾಗಿ ಕೆಲಸ ಮಾಡುವುದು ಅವಶ್ಯಕತೆ ಇದೆ ಎಂದರು. ಇದೇ ವೇಳೆ ಭಾಷಣದ ಮಧ್ಯೆ ಕಾರ್ಯಕರ್ತನೊಬ್ಬ ಮೈಸೂರಲ್ಲಿ ಒಂದಾಗಿ ಎಂದು ಮನವಿ ಮಾಡಿದಾಗ, ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಮೈಸೂರಲ್ಲಿ ಒಂದಾಗಿದ್ದೇವೆ, ಮಂಡ್ಯದಲ್ಲೂ ಒಂದಾಗಿದ್ದೀವಿ, ಹಾಸನ, ತುಮಕೂರು ಸೇರಿದಂತೆ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರದಲ್ಲೂ ಒಂದಾಗಿದ್ದೀವಿ ಎಂದು ತಿಳಿಸಿದರು.

ನೀವು ಎಲ್ಲರೂ ಒಂದಾಗಿ ಕೆಲಸ ಮಾಡ್ಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮುನೇಗೌಡ 63 ಸಾವಿರ ಮತ ಪಡೆದರೆ, ಕಾಂಗ್ರೆಸ್ ಪಕ್ಷದ ವೆಂಕಟರಮಣಯ್ಯ 74 ಸಾವಿರ ಮತ ಪಡೆದಿದ್ದರು. ಈಗ ಇಬ್ಬರೂ ಒಂದಾಗಿದ್ದೇವೆ. ಹಾಗಾಗಿ ಕನಿಷ್ಠ 50 ಸಾವಿರ ಲೀಡ್ ಕೊಡ್ಲೇಬೇಕೆಂದು ಸಿದ್ದರಾಮಯ್ಯ ದೊಡ್ಡಬಳ್ಳಾಪುರ ಮತದಾರರಲ್ಲಿ ಮನವಿ ಮಾಡಿಕೊಂಡರು.

ಜಂಟಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ವರಿಷ್ಠ ದೇವೇಗೌಡ, ಮೋದಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಕಳೆದ ಐದು ವರ್ಷಗಳ ಮೋದಿ ಆಡಳಿತದಲ್ಲಿ ಕೋಮುಗಲಭೆ ಹೆಚ್ಚಾಗಿದೆ. ಪ್ರಚಾರ ಮಾಡುವುದರಲ್ಲಿ ಆರ್​ಎಸ್​ಎಸ್ ಮುಂದಿದ್ದಾರೆ. ನಾವು ಹಳ್ಳಿಯವರು, ಸೋಷಿಯಲ್ ಮೀಡಿಯಾ ಬಳಸುವಲ್ಲಿ ಹಳ್ಳಿಯ ಮಕ್ಕಳು ಹಿಂದಿದ್ದಾರೆ. ಮೋದಿ ಸರ್ಕಾರದ ಅನಿಷ್ಟ ಕಾರ್ಯಕ್ರಮ ಘರ್ ವಾಪಸ್ಸಿ, ಹಿಂದೆ ಯಾರು ಮತಾಂತರಗೊಂಡು ಬೇರೆ ಧರ್ಮಕ್ಕೆ ಸೇರಿಕೊಂಡರೋ ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮ. ಈ ಕಾರ್ಯಕ್ರಮದಿಂದ ಗುಜರಾತ್, ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಾಕಷ್ಟು ಕೋಮುಗಲಭೆ ನಡಿದಿದೆ. ಕೋಮುಗಲಭೆಯಲ್ಲಿ ಹಲವು ಜನರ ಹತ್ಯೆಯಾಗಿದೆಯೆಂದು ದೇವೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ABOUT THE AUTHOR

...view details