ಕರ್ನಾಟಕ

karnataka

ETV Bharat / state

'ಡಾಲಿ ಧನಂಜಯ್​ ವಿರುದ್ಧ ಅನಗತ್ಯ ವಿವಾದ..': ದಲಿತ ಸಂಘಟನೆ ಪ್ರತಿಭಟನೆ

ಕೋಮುವಾದದ ವಿಷ ಬೀಜ ಬಿತ್ತುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ, ದಲಿತ ಸಂಘಟನೆ ಮುಖಂಡರು ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ
ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ

By

Published : Oct 27, 2022, 6:20 PM IST

Updated : Oct 27, 2022, 7:56 PM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾ): ನಟ ಡಾಲಿ ಧನಂಜಯ್​ ವಿರುದ್ಧ ಅನಗತ್ಯವಾಗಿ ವಿವಾದ ಉಂಟು ಮಾಡಿ, ಕೋಮುವಾದದ ವಿಷ ಬೀಜ ಬಿತ್ತುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘಟನೆ ಮುಖಂಡರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪ್ರಜಾ ವಿಮೋಚನಾ ಸಂಘಟನೆ, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಕೋಮುವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘಟನೆ ಪ್ರತಿಭಟನೆ

ದಲಿತ ಮುಖಂಡ ಗೂಳ್ಯ ಹನುಮಣ್ಣ ಮಾತನಾಡಿ, ಎಂಎಲ್​ಸಿ ಸಿ ಪಿ ಯೋಗೇಶ್ವರ್ ಎಸ್ಸಿ ಎಸ್ಟಿ ಜನಾಂಗಗಳು ನಮಗೆ ಮತ ನೀಡುವುದಿಲ್ಲ. ಅವರಿಗೆ ಅನುದಾನ ನೀಡಿದರೆ ತಲೆಯ ಮೇಲೆ ಕೂರುತ್ತಾರೆ. ಆದ್ದರಿಂದ ಎಸ್ಸಿ ಎಸ್ಟಿಗಳಿಗೆ ನೀಡುವ ಅನುದಾನವನ್ನು ನಿಲ್ಲಿಸುವಂತೆ ಸೂಚನೆ ನೀಡಿ ಪತ್ರ ನೀಡಿರುವುದು ಜನಾಂಗದ ಅಭಿವೃದ್ಧಿಯ ಮೇಲೆ ಮಾರಕವಾದ ಪರಿಣಾಮ ಬೀರುತ್ತದೆ. ವಸತಿ ಸಚಿವ ವಿ ಸೋಮಣ್ಣ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿರುವುದು ಹಿಟ್ಲರ್ ಸಂಸ್ಕೃತಿಯನ್ನು ಪ್ರತಿ ಬಿಂಬಿಸುತ್ತಿದೆ ಎಂದು ಕಿಡಿಕಾರಿದರು.

ಕಾಂತಾರ ಸಿನಿಮಾದಲ್ಲಿ ದಲಿತರನ್ನು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುವ ಮತ್ತು ಅಸ್ಪೃಶ್ಯ ಆಚರಣೆ ತೋರಿಸಲಾಗಿದೆ. ಭೂತಾರಾಧನೆ ಹಿಂದು ಸಂಸ್ಕೃತಿ ಅಲ್ಲ. ಅದು ದ್ರಾವಿಡ ಸಂಸ್ಕೃತಿ ಎಂದ ನಟ ಚೇತನ್ ಅಹಿಂಸಾ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಡಾಲಿ ಧನಂಜಯ ಅವರ ಹೆಡ್‌ಬುಷ್ ಸಿನಿಮಾದಲ್ಲಿ ವೀರಗಾಸೆ ಮತ್ತು ಕರಗದ ವೇಷಧಾರಿಗಳ ಮೇಲೆ ಹಲ್ಲೆ ನಡೆದಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ:ವೀರಗಾಸೆ ಕಲೆಗೆ ಅಪಮಾನವಾಗುವ ದೃಶ್ಯಗಳನ್ನು ತೆಗೆಯಿರಿ: ಸಚಿವ ಸುನಿಲ್ ಕುಮಾರ್

Last Updated : Oct 27, 2022, 7:56 PM IST

ABOUT THE AUTHOR

...view details