ಬೆಂಗಳೂರು: ಮಾದಕ ವಸ್ತು ಖರೀದಿ ಹಾಗೂ ಮಾರಾಟ ಮಾಡುವವರ ವಿರುದ್ಧ ಸಮರ ಸಾರಿರುವ ಕೇಂದ್ರ ಮಾದಕವಸ್ತು ನಿಯಂತ್ರಣ ಮಂಡಳಿಯು ವಿಳಾಸವಿಲ್ಲದೆ ವಿದೇಶಿ ಪೋಸ್ಟ್ ಮೂಲಕ ಉಡುಪಿಗೆ ಬಂದ್ದಿದ 750 ಗ್ರಾಂ ತೂಕದ ಎಂಡಿಎಂಎ ಜಪ್ತಿ ಮಾಡಿದ್ದು, ನಾಲ್ವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕೆ.ಪ್ರಮೋದ್, ಡ್ರಗ್ಸ್ ಸೂತ್ರದಾರ ಫಾಹಿಮ್, ಹಶೀರ್ ಮತ್ತು ಎಸ್.ಎಸ್.ಶೆಟ್ಟಿ ಬಂಧಿತರಾಗಿದ್ದು, ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು ಉಡುಪಿಯ ಮಣಿಪಾಲ ಯುನಿವರ್ಸಿಟಿ NMAMIT ಕಾಲೇಜು, SRM ಯುನಿವರ್ಸಿಟಿ ಚೆನ್ನೈ ವಿದ್ಯಾರ್ಥಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.