ದೇವನಹಳ್ಳಿ (ಬೆಂ.ಗ್ರಾಂ): ಚೀನಾ ಮತ್ತು ಭಾರತದ ಗಡಿಯಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ, ಚೀನಾ ಮತ್ತು ಭಾರತ ಪ್ರಧಾನಿಗಳ ಪರಸ್ಪರ ಅವಿಶ್ವಾಸದ ಹಿನ್ನೆಲೆ ಯುದ್ಧದ ವಾತಾವರಣ ಉಂಟಾಗಿದ್ದು, ಇದರಿಂದ ಅಮಾಯಕ ಯೋಧರ ಹತ್ಯೆಯಾಗುತ್ತಿದೆ. ಎರಡೂ ದೇಶಗಳ ನಡುವಿನ ಸಾಮರಸ್ಯ ಹಾಳು ಮಾಡಬಾರದು, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ ಪ್ರಪಂಚಾದ್ಯಂತ ಕೋವಿಡ್ ಇರೋದ್ರಿಂದ ಜನರು ಆತಂಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಮತ್ತು ಚೀನಾಗೆ ಸಂಘರ್ಷ ಉಂಟಾಗಿರುವುದು ಸರಿಯಲ್ಲ. ಈ ಸಂಘರ್ಷ ವಿಶ್ವಕ್ಕೂ ಮತ್ತು ಎರಡು ದೇಶಗಳಿಗೆ ಉತ್ತಮ ಬೆಳವಣಿಗೆ ಅಲ್ಲ ಎಂದರು.