ಬೆಂಗಳೂರು: ನಿನ್ನೆ ರಾತ್ರಿ ಒಂದು ತಾಸಿಗೂ ಹೆಚ್ಚು ಹೊತ್ತು ಅಬ್ಬರಿಸಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ದಕ್ಷಿಣ ಸೇರಿದಂತೆ ಆನೇಕಲ್ ತಾಲೂಕಿನ ಗಡಿ ಗ್ರಾಮಗಳು ಮಳೆಯ ಅಬ್ಬರಕ್ಕೆ ನಲುಗಿವೆ.
ಬೆಂಗಳೂರಲ್ಲಿ ಆರ್ಭಟಿಸಿದ ವರುಣ... ಧರೆಗುರುಳಿದ ಮರ, ವಿದ್ಯುತ್ ಕಂಬಗಳು - anekal
ಬೆಂಗಳೂರಲ್ಲಿ ಆರ್ಭಟಿಸಿದ ಮಳೆ- ಬಳ್ಳೂರು, ಬನ್ನೇರುಘಟ್ಟ, ಅರಕೆರೆ, ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ, ಮಡಿವಾಳ ಕಾಲುವೆಗಳು ತುಂಬಿ ಮನೆಗಳಿಗೆ ನುಗ್ಗಿದ ನೀರು - ಮಳೆ-ಗಾಳಿಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು
ಬಳ್ಳೂರು-ಅತ್ತಿಬೆಲೆ ರಸ್ತೆಯ ಮರವೊಂದು ಧರೆಗುರುಳಿದೆ. ಈ ಮರದ ಕೆಳಗೆ ಇದ್ದ ವಿದ್ಯುತ್ ಕಂಬ ಸಹ ಮನೆ ಮೇಲೆ ಮುರಿದು ಬಿದ್ದಿದೆ. ಈ ಕಾರಣದಿಂದ ಮನೆ ಮೇಲಿನ ಶೀಟ್ ಜಖಂಗೊಂಡಿದೆ. ಕೆಇಬಿ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಿದ್ದಾರೆ.
ಬಳ್ಳೂರು, ಬನ್ನೇರುಘಟ್ಟ, ಅರಕೆರೆ, ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ, ಮಡಿವಾಳ ಕಾಲುವೆಗಳು ತುಂಬಿ ಮನೆಗಳಿಗೆ ನೀರು ನುಗ್ಗಿತ್ತು. ಮಳೆಯ ಅಬ್ಬರ ಒಂದೆಡೆಯಾದರೆ, ಬಿರುಗಾಳಿಗೆ ಮರ ವಿದ್ಯುತ್ ಕಂಬಗಳು ರಸ್ತೆ-ಮನೆಗಳ ಮೇಲೆ ಉರುಳಿವೆ. ಇನ್ನು ಬನ್ನೇರುಘಟ್ಟ - ಬೆಂಗಳೂರು ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮೆಟ್ರೋ ಕಾಮಗಾರಿಯ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ವಾಹನ ಸವಾರರು ಭಯದಿಂದಲೇ ಸಂಚಾರ ಮಾಡುತ್ತಿದ್ದಾರೆ.