ಕರ್ನಾಟಕ

karnataka

ETV Bharat / state

ಗ್ರಾಪಂ ಅಧ್ಯಕ್ಷ ಸ್ಥಾನಕ್ಕೂ ಲಾಬಿ.. ರೆಸಾರ್ಟ್​​​ನಲ್ಲಿ ಸದಸ್ಯರ ಮಸ್ತ್​ ಮಸ್ತ್ ನಾಗಿಣಿ ಡ್ಯಾನ್ಸ್​ - ನಾಗಿಣಿ ಡ್ಯಾನ್ಸ್

ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಆಯ್ಕೆಗೊಂಡ ಸದಸ್ಯರು ರೆಸಾರ್ಟ್​ನಲ್ಲಿ ಹೈಕ್ಲಾಸ್ ಮಸ್ತಿಯಲ್ಲಿ ತೊಡಗಿದ್ದು, ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. ರೆಸಾರ್ಟ್​ನಲ್ಲಿ ತಂಗಿರುವ ಸದಸ್ಯರು ನಾಗಿಣಿ ಡ್ಯಾನ್ಸ್ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

gram-panchayat-members-did-nagin-dance-in-resort
ರೆಸಾರ್ಟ್​​​ನಲ್ಲಿ ಸದಸ್ಯರ ಮಸ್ತ್​ ಮಸ್ತ್ ನಾಗಿಣಿ ಡ್ಯಾನ್ಸ್​

By

Published : Feb 5, 2021, 7:11 PM IST

ದೊಡ್ಡಬಳ್ಳಾಪುರ (ಬೆಂ.ಗ್ರಾ): ಶಾಸಕರ ರೆಸಾರ್ಟ್ ರಾಜಕೀಯ ಆಯ್ತು, ಈಗ ಗ್ರಾಮ ಪಂಚಾಯತ್ ಸದಸ್ಯರೂ ಸಹ ಅಧಿಕಾರಕ್ಕಾಗಿ ರೆಸಾರ್ಟ್​ ರಾಜಕೀಯ ನಡೆಸಲು ಆರಂಭಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಹೈ ಲಾಬಿ ಆರಂಭವಾಗಿದೆ.

ಇದೀಗ ಕೊನಘಟ್ಟ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಿರಿಗಾಗಿ ಗ್ರಾಮ ಪಂಚಾಯತ್ ಸದಸ್ಯರು ರೆಸಾರ್ಟ್​ಗೆ ತೆರಳಿರುವುದು ಒಂದೆಡೆಯಾದರೆ, ರೆಸಾರ್ಟ್​ನಲ್ಲಿ ಮಸ್ತ್ ಆಗಿ ನಾಗಿಣಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ರೆಸಾರ್ಟ್​​​ನಲ್ಲಿ ಸದಸ್ಯರ ಮಸ್ತ್​ ಮಸ್ತ್ ನಾಗಿಣಿ ಡ್ಯಾನ್ಸ್​

ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಆಯ್ಕೆಗೊಂಡ ಸದಸ್ಯರು ರೆಸಾರ್ಟ್​ನಲ್ಲಿ ಹೈಕ್ಲಾಸ್ ಮಸ್ತಿಯಲ್ಲಿ ತೊಡಗಿದ್ದು, ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ. ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಆಪ್ತ ಮತ್ತು ಕೆಪಿಸಿಸಿ ಸದಸ್ಯ ಲಕ್ಷ್ಮಿಪತಿ ಗ್ರಾಮ ಪಂಚಾಯತ್ ಸದಸ್ಯರನ್ನು ತಮಿಳುನಾಡು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ರೆಸಾರ್ಟ್​​​​ನಲ್ಲಿ ತಂಗಿದ್ದ ವೇಳೆ ಕೊನಘಟ್ಟ ಗ್ರಾಮದ ಹಾಲಿ ಸದಸ್ಯ ಸೋಮಶೇಖರ್ ಹಾಗೂ ಲಿಂಗನಹಳ್ಳಿ ಸದಸ್ಯ ಸಿದ್ದಲಿಂಗಯ್ಯ ನಾಗಿಣಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ, ರೆಸಾರ್ಟ್​​ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಸದಸ್ಯರ ನಡೆಗೆ ಗ್ರಾಮದಲ್ಲಿ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:ಬೆಂಗಳೂರು-ಹೈದರಾಬಾದ್ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಶೆಟ್ಟರ್​​

ABOUT THE AUTHOR

...view details