ಕರ್ನಾಟಕ

karnataka

ETV Bharat / state

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ - ಈಟಿವಿ ಭಾರತ ಕನ್ನಡ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ವರ್ಷಾವಧಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ghati-subrahmanya-brahmarathotsava
ಅದ್ದೂರಿಯಾಗಿ ನೆರವೇರಿದ ಬ್ರಹ್ಮರಥೋತ್ಸವ

By

Published : Dec 28, 2022, 3:33 PM IST

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾ.): ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ಅದ್ಧೂರಿಯಾಗಿ ಬ್ರಹ್ಮರಥೋತ್ಸವ ಜರುಗಿತು. ಕೋವಿಡ್ ಹಾವಳಿ ಮರುಕಳಿಸಿದ್ದರಿಂದ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ದಕ್ಷಿಣ ಭಾರತದ ಪ್ರಮುಖ ನಾಗಾರಾಧನೆಯ ಸ್ಥಳವಾಗಿ ಘಾಟಿ ಸುಬ್ರಹ್ಮಣ್ಯ ಪ್ರಸಿದ್ದಿ ಪಡೆದಿದೆ.

ಕೋವಿಡ್ ಕಾರಣದಿಂದ ಕಳೆದೆರಡು ವರ್ಷದಿಂದ ದೇವಸ್ಥಾನದ ಪ್ರಾಂಗಣದಲ್ಲೇ ಸರಳವಾಗಿ ಬ್ರಹ್ಮರಥೋತ್ಸವ ನಡೆದಿತ್ತು. ಈ ಸಲ ಬ್ರಹ್ಮರಥೋತ್ಸವ ಸಾರ್ವಜನಿಕರ ಸಮ್ಮುಖದಲ್ಲಿ ನಡೆದಿದೆ. ಬೆಳಿಗ್ಗೆ 11.50 ರಿಂದ 12ರೊಳಗಿನ ಶುಭ ಮೀನ ಲಗ್ನದಲ್ಲಿ‌ ಸ್ವಾಮಿಯ ರಥೋತ್ಸವ ನೆರೆವೇರಿದೆ.

ಕೋವಿಡ್ 4ನೇ ಅಲೆ ಪ್ರಾರಂಭಿಕ ಹಂತದಲ್ಲಿದ್ದು, ಆತಂಕದಿಂದಾಗಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಗೋಚರಿಸಿತು. ಭಕ್ತರು ನಾಗರ ಮೂರ್ತಿಗಳಿಗೆ ಹಾಲೆರೆದು ದೇವರ ದರ್ಶನ ಪಡೆದರು. ವಿವಿಧ ಸಂಘ ಸಂಸ್ಥೆಗಳು ಭಕ್ತರಿಗೆ ಮಜ್ಜಿಗೆ, ಪಾನಕ ಮತ್ತು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿ:ವಿಜಯಪುರ: ಭಕ್ತರಿಗೆ ದರ್ಶನ ನೀಡಿದ ಸಿದ್ದೇಶ್ವರ ಶ್ರೀ

ABOUT THE AUTHOR

...view details