ಕರ್ನಾಟಕ

karnataka

ETV Bharat / state

ಕಂದಾಯ ಇಲಾಖೆಯಿಂದ ಎಡವಟ್ಟು: ಹೂ ಬೆಳೆಗಾರರ ಕೈ ಸೇರದ ಪರಿಹಾರದ ಹಣ - Flower growers protest

ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಯಾವುದೋ ಜಮೀನಿನ ಫೋಟೋಗಳನ್ನು ಹಾಕುವ ಮೂಲಕ ಪಹಣಿಯಲ್ಲಿ ಬೆಳೆ ದಾಖಲು ಮಾಡುತ್ತಿದ್ದಾರೆ. ಇದರಿಂದ ಹೂ ಬೆಳೆಯುವ ಬದಲು ಬೇರೆ ಬೆಳೆ ಸಮೀಕ್ಷೆ‌ಯಲ್ಲಿ ಬರುತ್ತಿದೆ. ಇದರಿಂದ ಬೆಳೆಗಾರರಿಗೆ ಪರಿಹಾರ ಸಿಗದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Flower growers protest against revenue department in Doddaballapura
ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಧರಣಿ

By

Published : Jun 19, 2020, 2:26 PM IST

ದೊಡ್ಡಬಳ್ಳಾಪುರ: ಬೆಳೆ ಸಮೀಕ್ಷೆಯಲ್ಲಿ ಕಂದಾಯ ಇಲಾಖೆ ಮಾಡಿದ ತಪ್ಪಿನಿಂದಾಗಿ ರೈತರಿಗೆ ಯಾವುದೇ ಪರಿಹಾರ ಹಾಗೂ ಸೌಲಭ್ಯಗಳು ದೊರೆಯದಂತಾಗಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಪ್ರತಿ ವರ್ಷವೂ ಕಂದಾಯ ಇಲಾಖೆ ಪ್ರತಿಯೊಬ್ಬ ರೈತರ ಜಮೀನಿಗೆ ಭೇಟಿ ನೀಡಿ, ಜಿಪಿಆರ್​ಎಸ್​​​​ ಮೂಲಕ ಜಮೀನಿನಲ್ಲಿ ಇರುವ ಬೆಳೆಯ ಫೋಟೋ ಸಮೇತ ಪಹಣಿಯಲ್ಲಿ ದಾಖಲಿಸುತ್ತಿದೆ. ಆದರೆ, ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಯಾವುದೋ ಜಮೀನಿನ ಫೋಟೋಗಳನ್ನು ಹಾಕುವ ಮೂಲಕ ಪಹಣಿಯಲ್ಲಿ ಬೆಳೆ ದಾಖಲು ಮಾಡುತ್ತಿದ್ದಾರೆ. ಇದರಿಂದ ಹೂ ಬೆಳೆಯುವ ಬದಲು ಬೇರೆ ಬೆಳೆ ಸಮೀಕ್ಷೆ‌ಯಲ್ಲಿ ಬರುತ್ತಿದೆ. ಇದರಿಂದ ಬೆಳೆಗಾರರಿಗೆ ಪರಿಹಾರ ಸಿಗದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೂ ಬೆಳೆಗಾರರಿಂದ ಪ್ರತಿಭಟನೆ

ಈ ವೇಳೆ ಮಾತನಾಡಿದ ಹೂ ಬೆಳೆಗಾರರಾದ ಶ್ಯಾಮ್​​ ಸುಂದರ್, ಕಳೆದ ಹತ್ತು ವರ್ಷಗಳಿಂದ ಹಸಿರು ಮನೆ ನಿರ್ಮಾಣ ಮಾಡಿಕೊಂಡು 8 ಎಕರೆ ಪ್ರದೇಶದಲ್ಲಿ ಹೂವು ಬೆಳೆಯಲಾಗುತ್ತಿದೆ. ಆದರೆ, 2019-2020ನೇ ಸಾಲಿನ ಪಹಣಿಯಲ್ಲಿ ಕೃಷಿಯೇತರ ಬೆಳೆ ಎಂದು ನಮೂದಿಸಲಾಗಿದೆ ಎಂದರು.

ಅಲ್ಲದೇ, ಲಾಕ್​ಡೌನ್​​​ ಜಾರಿಯಿಂದಾಗಿ ಹೂವು ಬೆಳೆಗಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಸಲುವಾಗಿ ಹೆಕ್ಷೇರ್​ಗೆ 25 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ಈ ಪರಿಹಾರದ ಮೊತ್ತವನ್ನು ಪಡೆಯಲು ಪಹಣಿಯಲ್ಲಿ ಹೂವು ಬೆಳೆ ಸೇರಿದಂತೆ ಇತರ ಯಾವ ಬೆಳೆ ಇದೆ ಎನ್ನುವುದು ಇರಲೇಬೇಕು. ಇದು ಯಾರೋ ಒಬ್ಬ ರೈತರ ಸಮಸ್ಯೆ ಮಾತ್ರ ಆಗಿಲ್ಲ. ಈ ಹಿಂದೆ ಕೇಂದ್ರ ಸರ್ಕಾರ ಬೆಂಬಲ ಬೆಳೆ ಯೋಜನೆಯಲ್ಲಿ ರಾಗಿ ಖರೀದಿಗೂ ಸಹ ಇದೇ ನಿಯಮ ಮಾಡಿದ್ದರಿಂದ ಬಹುತೇಕ ರೈತರಿಗೆ ರಾಗಿ ಮಾರಾಟ ಮಾಡಲು ತೊಂದರೆ ಅನುಭವಿಸುವಂತಾಯಿತು ಎಂದು ತಿಳಿಸಿದ ಅವರು, ಈಗ ಹೂವು ಹಾಗೂ ಮುಸುಕಿನ ಜೋಳದ ಬೆಳೆ ಪರಿಹಾರ ಪಡೆಯಲು ಸಹ ಅಡ್ಡಿಯಾಗಿದೆ ಎಂದು ವಿವರಿಸಿದರು.

ಧರಣಿ ನಿರತ ರೈತರನ್ನು ಭೇಟಿ ಮಾಡಿದ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಪಹಣಿಯಲ್ಲಿ ಬೆಳೆ ಸಮೀಕ್ಷೆ ವರದಿ ಕುರಿತು ದಾಖಲಾಗಿರುವ ದೋಷವನ್ನು ಸರಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ತೋಟಗಾರಿಕಾ ಹಿರಿಯ ನಿರ್ದೇಶಕರಾದ ಶ್ರೀನಿವಾಸ್ ಆದಷ್ಟು ಬೇಗ ಲೋಪದೋಷಗಳನ್ನ ಸರಿಪಡಿಸಿ ರೈತರಿಗೆ ಪರಿಹಾರದ ಹಣ ನೀಡುವ ಭರವಸೆ ನೀಡಿದ್ದಾರೆ.

ABOUT THE AUTHOR

...view details