ಕರ್ನಾಟಕ

karnataka

ಕ್ಯಾನ್ಸರ್‌ ರೋಗಿಗಳ ನೆರವಿಗೆ ಇಎಲ್​ವಿ ಸಂಸ್ಥೆಯಿಂದ 'ಬೆಂಗಳೂರು ಈಸ್ಟ್ ಮ್ಯಾರಥಾನ್'

By

Published : Dec 4, 2022, 7:55 PM IST

Updated : Dec 4, 2022, 8:15 PM IST

ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಸಂಗ್ರಹಿಸುವ ಸಲುವಾಗಿ "ಬೆಂಗಳೂರು ಈಸ್ಟ್ ಮ್ಯಾರಥಾನ್" ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

elv-organized-marathon-to-help-cancer-patients
ಕ್ಯಾನ್ಸರ್‌ ರೋಗಿಗಳ ನೆರವಿಗೆ ಇಎಲ್​ವಿ ಸಂಸ್ಥೆಯಿಂದ 'ಬೆಂಗಳೂರು ಈಸ್ಟ್ ಮ್ಯಾರಥಾನ್' ಆಯೋಜನೆ

ಮಹದೇವಪುರ(ಬೆಂಗಳೂರು): ವೈಟ್‌ಫೀಲ್ಡ್‌ನ ಇನ್ನರ್ ಸರ್ಕಲ್‌ನಲ್ಲಿ ಇಎಲ್​ವಿ ಸಂಸ್ಥೆಯ ಮಾಲಿಕ ಭಾಸ್ಕರ್ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಸಂಗ್ರಹಿಸುವ ಸಲುವಾಗಿ "ಬೆಂಗಳೂರು ಈಸ್ಟ್ ಮ್ಯಾರಥಾನ್" ಎಂಬ ವಿಶೇಷ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಲಿಂಬಾವಳಿ ಮತ್ತು ಐಪಿಎಸ್ ಉಪ ಪೊಲೀಸ್ ಆಯುಕ್ತ ಎಸ್ ಗಿರೀಶ್ ಚಾಲನೆ ನೀಡಿದರು. ಈಸ್ಟ್ ಮ್ಯಾರಥಾನ್​ನಲ್ಲಿ, ಓಟಗಾರರು 'ರನ್ ಟು ಕೇರ್, ಕೇರ್ ಟು ಕ್ಯೂರ್' ಮಿಷನ್‌ನೊಂದಿಗೆ ವೈಟ್‌ಫೀಲ್ಡ್ ನ ಇನ್ನರ್ ಸರ್ಕಲ್​ನಿಂದ ಸರ್ಜಾಪುರ ಜೆಎಸ್ ಫುಟ್‌ಬಾಲ್ ಅಕಾಡೆಮಿಯವರೆಗೆ ಓಡಿದರು.

ಕ್ಯಾನ್ಸರ್‌ ರೋಗಿಗಳ ನೆರವಿಗೆ ಇಎಲ್​ವಿ ಸಂಸ್ಥೆಯಿಂದ 'ಬೆಂಗಳೂರು ಈಸ್ಟ್ ಮ್ಯಾರಥಾನ್' ಆಯೋಜನೆ

ಮ್ಯಾರಥಾನ್​ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಇಂತಹ ಉತ್ತಮ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿರುವುದು ಪ್ರಶಂಸನೀಯ ಎಂದು ಹೇಳಿದರು. ಇದೇ ವೇಳೆ ಕನ್ನಡೇತರರು ಸುಮಧುರ ಭಾಷೆ ಕನ್ನಡವನ್ನು ಕಲಿಯುವಂತೆ ಜೊತೆಗೆ, ಕನ್ನಡ ಗೊತ್ತಿದ್ದವರು ಕನ್ನಡೇತರರಿಗೆ ಕನ್ನಡ ಭಾಷೆಯನ್ನು ಕಲಿಸುವಂತೆ ಕನ್ನಡ ಜಾಗೃತಿ ಪಾಠ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕನ್ನಡ ಚಿತ್ರರಂಗ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಆರಾಮವಾಗಿ, ಖುಷಿಯಾಗಿ, ಎಂಜಾಯ್ ಮಾಡಿಕೊಂಡು ಮ್ಯಾರಥಾನ್​ ಓಡಿ. ಭಾಗವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದು ಓಟಗಾರರಿಗೆ ಶುಭಹಾರೈಸಿದರು.

ಈ ವೇಳೆ ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಮತ್ತು ಬಾಡಿ ಬಿಲ್ಡರ್ ಕಿರಣ್ ಕುಮಾರ್, ಇಸ್ರೋ ಹಿರಿಯ ವಿಜ್ಞಾನಿ ಪರ್ನಾಯಕ್, ಅಂತಾರಾಷ್ಟ್ರೀಯ ಅಥ್ಲೇಟ್ ಸೆಲೆಬ್ರಿಟಿ ಕೋಚ್ ಮತ್ತು ಮಾಡೆಲ್ ಪವಿ ಪಡುಕೋಣೆ,‌ ಇ.ಎಲ್.ವಿ ಸಂಸ್ಥೆಯ ಮಾಲಿಕ ಭಾಸ್ಕರ್, ಮುಖಂಡ ಎಲ್.ರಾಜೇಶ್, ವರ್ತೂರು ಶ್ರೀಧರ್, ಮಹೇಂದ್ರ ಮೋದಿ, ಕರುಣಾಶ್ರಯದ ಸಿಬ್ಬಂದಿ ವರ್ಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ನಟಿ ಹನ್ಸಿಕಾ ಮೋಟ್ವಾನಿ ಮದುವೆ ಸಂಭ್ರಮ.. ಬಡ ಮಕ್ಕಳಿಗೆ ಆಹ್ವಾನ

Last Updated : Dec 4, 2022, 8:15 PM IST

ABOUT THE AUTHOR

...view details