ಕರ್ನಾಟಕ

karnataka

ETV Bharat / state

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ವಿಳಂಬ: ಪ್ರಯಾಣಿಕರು ಸಿಡಿಮಿಡಿ - ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಕಾರಣಕ್ಕೆ ತೀವ್ರ ತಪಾಸಣೆ ನಡೆಸಿದ ಹಿನ್ನೆಲೆ ಚೆಕ್ ಇನ್ ವಿಳಂಬವಾಗಿದ್ದು, ಪ್ರಯಾಣಿಕರು ಅಕ್ರೋಶ ವ್ಯಕ್ತಪಡಿಸಿದರು.

kempegowda airport
ಕೆಂಪೇಗೌಡ ವಿಮಾನ ನಿಲ್ದಾಣ

By

Published : Sep 15, 2022, 1:41 PM IST

ದೇವನಹಳ್ಳಿ: ಸೆಕ್ಯೂರಿಟಿ ಕಾರಣಕ್ಕೆ ತೀವ್ರ ತಪಾಸಣೆ ನಡೆಸಿದ್ದರಿಂದ ಚೆಕ್ ಇನ್ ವಿಳಂಬವಾಗಿದ್ದು, ಪ್ರಯಾಣಿಕರು ಅಕ್ರೋಶ ವ್ಯಕ್ತಪಡಿಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು.

ಕಳೆದ ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ತೀವ್ರವಾಗಿ ತಪಾಸಣೆ ನಡೆಸಿದ್ದು, ಇದೇ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯಿಂದ ಚೆಕ್ ಇನ್ ವಿಳಂಬವಾಗಿದೆ ಎನ್ನಲಾಗ್ತಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕೆಐಎಎಲ್​ನಲ್ಲಿ ಪ್ರಸಾದದ ತೆಂಗಿನಕಾಯಿ ಹೊಂದಿದ್ದ ಪ್ರಯಾಣಿಕನ ತಡೆದ ಸಿಬ್ಬಂದಿ

ಚೆಕ್ ಇನ್ ಪೂರ್ಣಗೊಳಿಸಲು 90 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಯಾಣಿಕರು 'ಜನ ದಟ್ಟಣೆ ಸಮಯದಲ್ಲಿ ಹೆಚ್ಚಿನ ಚೆಕ್ ಇನ್ ಕೌಂಟರ್ ತೆರೆಯದೇ ಇದ್ದದ್ದು ಮತ್ತು ಚೆಕ್ ಇನ್ ಕೌಂಟರ್ ಬಳಿ ಸಿಐಎಸ್​ಎಫ್​ ಸಿಬ್ಬಂದಿ ನಿಯೋಜನೆ ಮಾಡದಿರುವುದು ಘಟನೆಗೆ ಕಾರಣ ಎಂದಿದ್ದಾರೆ.

ಇನ್ನು ಚೆಕ್ ಇನ್ ವಿಳಂಬದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಐಎಎಲ್, ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಭದ್ರತೆಯ ಕಾರಣಕ್ಕೆ ತೀವ್ರ ತಪಾಸಣೆ ನಡೆಸಲಾಯಿತು ಎಂದಿದೆ.

ಇದನ್ನೂ ಓದಿ:ಕೆಂಪೇಗೌಡ ಏರ್‌ಪೋರ್ಟ್​ ಪಿಕ್‌ಅಪ್ ಪಾಯಿಂಟ್​ನಲ್ಲಿ ಮಳೆನೀರು: ವಿಡಿಯೋ

ABOUT THE AUTHOR

...view details