ಕರ್ನಾಟಕ

karnataka

ETV Bharat / state

ರಣಾಂಗಣಕ್ಕೆ ಸಿದ್ಧವಾಯ್ತು ಹೊಸಕೋಟೆ ಅಖಾಡ....  ಹೇಗಿತ್ತು ವಾಕ್ ಸಮರ? - ಶರತ್ ಬಚ್ಚೇಗೌಡ

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಇಂದಿನ ಸುಪ್ರೀಂಕೋರ್ಟ್ ತೀರ್ಪು ವರದಾನವಾಗಿದ್ರೆ. ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿ ವಂಚಿತರಾಗಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಹೋರಾಟಕ್ಕೆ  ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದ್ರೀಗ ತೀರ್ಪಿನಿಂದಾಗಿ ಹೊಸಕೋಟೆ ಚುನಾವಣಾ ಕಣದಲ್ಲಿ ಬಿಗ್ ಫೈಟ್ ಶುರುವಾಗಿದೆ.

ರಣಾಂಗಣಕ್ಕೆ ಸಿದ್ಧವಾಯ್ತು ಹೊಸಕೋಟೆ ಅಖಾಡ

By

Published : Nov 13, 2019, 9:08 PM IST

Updated : Nov 14, 2019, 8:03 AM IST

ಹೊಸಕೋಟೆ: ಇಂದು ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಹೊಸಕೋಟೆ ವಿಧಾನಸಭಾ ಉಪಚುನಾವಣಾ ಕಣ ರಣರಂಗದಂತಾಗಿದ್ದು, ಶರತ್ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ನಡುವೆ ಬಿಗ್ ಫೈಟ್ ಶುರುವಾಗಿದೆ.

ಅನರ್ಹ ಶಾಸಕ ಎಂಟಿಬಿ ನಾಗರಾಜ್​​ಗೆ ಇಂದಿನ ಸುಪ್ರೀಂಕೋರ್ಟ್ ತೀರ್ಪು ವರದಾನವಾಗಿದ್ರೆ. ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿ ವಂಚಿತರಾಗಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಹೋರಾಟಕ್ಕೆ ಬಿರುಸಿನ ಪ್ರಚಾರ ನಡೆಸುತ್ತಿದ್ದು, ನಾಳೆ ನಾಮಪತ್ರ ಸಲ್ಲಿಸುವ ದಿನಾಂಕ ಘೋಷಣೆ ಮಾಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಅವಕಾಶ ಇದ್ರೆ ಶರತ್ ಗೆ ಬೆಂಬಲ ಸೂಚಿಸೋದಾಗಿ ತಿಳಿಸಿದ್ದು ಹೊಸಕೋಟೆ ಚುನಾವಣಾ ಕಣದಲ್ಲಿ ಬಿಗ್ ಫೈಟ್ ಶುರುವಾಗಿದೆ.

ರಣಾಂಗಣಕ್ಕೆ ಸಿದ್ಧವಾಯ್ತು ಹೊಸಕೋಟೆ ಅಖಾಡ

ಹೊಸಕೋಟೆ ಅನರ್ಹ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ, ತೀರ್ಪು ಸ್ವಾಗತಿಸುತ್ತೇವೆ. ಬಿಜೆಪಿ ಪಕ್ಷ ನನ್ನ ಬೆನ್ನಿಗೆ ನಿಲ್ಲುತ್ತದೆ ಎಂದ ಅವರು, ರಾಜಕಾರಣದಲ್ಲಿ ನಾವು ಸಾರ್ವಜನಿಕರ ಸೇವೆಗಾಗಿ ಬಂದಿದ್ದೇವೆ ಎನ್ನುತ್ತಿರುವ ಅಪ್ಪ - ಮಗನನ್ನು ಮಾಧ್ಯಮದ ಮುಂದೆ ಚರ್ಚೆಗೆ ಕರೆಯಿರಿ ನಾನೂ ಬರುತ್ತೇನೆ ಎಂದು ಬಚ್ಚೇಗೌಡ ಹಾಗೂ ಪುತ್ರ ಶರತ್ ಬಚ್ಚೇಗೌಡಗೆ ಸವಾಲ್ ಹಾಕಿದ್ದಾರೆ.

ನಂತರ ಮಾತನಾಡಿದ ಅವರು, ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಪಕ್ಷಕ್ಕೆ ಸೇರ್ಪಡೆ ಬಗ್ಗೆ ನಾಯಕರ ಜೊತೆ ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಂಡು, ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿ ಮಾಡುತ್ತೇವೆ. ಹಾಗೆ ಹೊಸಕೋಟೆಯ ಗೊಂದಲಗಳನ್ನು ಬಿಜೆಪಿ ನಾಯಕರೇ ಸರಿಪಡಿಸುತ್ತಾರೆ ಎಂದರು.

ಇನ್ನು ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಮಾತನಾಡಿದ್ದು, ತಾಲೂಕಿನ ಜನ ಮತ್ತು ಕಾರ್ಯಕರ್ತರ ಆಸೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ.ಇನ್ನು ಎಂಟಿಬಿ ನಾಗರಾಜ್ ಚರ್ಚೆಗೆ ಆಹ್ವಾನ ಮಾಡಿದ್ದಾರೆ. ಅಪ್ಪ ಮಕ್ಕಳು ಚರ್ಚೆಗೆ ಬರೋ ಅವಶ್ಯಕತೆ ಇಲ್ಲ. ಅವರ ವಿರುದ್ಧ ಸ್ಪರ್ಧೆಗೆ ನಿಂತಿರುವುದು ನಾನು , ಬಚ್ಚೇಗೌಡರು ರಾಜ್ಯದ ದೊಡ್ಡ ಮಟ್ಟದ ನಾಯಕರು ಅಂತವರನ್ನು ಇಂತಹ ಲೋ ಲೆವೆಲ್ ಡಾಗ್ ಫೈಟ್ ಗೆ ತೆಗೆದುಕೊಂಡು ಹೋಗಬಾರದು.ನಾನು ಅವರೊಂದಿಗೆ ಚರ್ಚೆಗೆ ಸಿದ್ದ ಎಂದು ಪ್ರತಿದಾಳಿ ನಡೆಸಿದ್ದಾರೆ.

Last Updated : Nov 14, 2019, 8:03 AM IST

ABOUT THE AUTHOR

...view details