ಕರ್ನಾಟಕ

karnataka

ETV Bharat / state

ಪೆರಿಷಬಲ್‌ ಸರಕು ಸಾಗಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಅಗ್ರಸ್ಥಾನ - etv bharat kannada

ಸತತ ಎರಡನೇ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೆರಿಷಬಲ್‌ ಸರಕು ಸಾಗಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಲಭಿಸಿದೆ.

bengaluru-airport-tops-again-in-perishable-cargo
ಪೆರಿಷಬಲ್‌ ಸರಕು ಸಾಗಣೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಅಗ್ರಸ್ಥಾನ

By

Published : Sep 29, 2022, 5:59 PM IST

ದೇವನಹಳ್ಳಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಎರಡನೇ ಬಾರಿಗೆ ಪೆರಿಷಬಲ್‌ ಸರಕು ಸಾಗಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷವೂ ಕೂಡ 48,130 ಟನ್‌ಗಳಷ್ಟು ಸಾಗಣೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿತ್ತು.

2021-22ರ ಹಣಕಾಸು ವರ್ಷದಲ್ಲಿ 52,366 ಮೆಟ್ರಿಕ್‌ ಟನ್‌ನಷ್ಟು ಬೇಗ ಹಾಳಾಗುವ ಹಣ್ಣು, ತರಕಾರಿ, ಹೂನಂತಹ ಪೆರಿಷಬಲ್‌ ಸರಕು ಸಾಗಣೆ ಮಾಡುವ ಮೂಲಕ ಮತ್ತೊಮ್ಮೆ ಮೊದಲ ಸ್ಥಾನ ಪಡೆದಿದೆ.

ಪ್ರತಿನಿತ್ಯ ಬೆಂಗಳೂರಿನಿಂದ 33 ಸರಕು ಸಾಗಣೆ ವಿಮಾನಗಳು ಲಂಡನ್‌, ಸಿಂಗಾಪುರ ಸೇರಿದಂತೆ ಒಟ್ಟು 48 ವಿದೇಶಗಳಿಗೆ ರಫ್ತು ಮಾಡುತ್ತಿದೆ. ದಕ್ಷಿಣ ಭಾರತದಿಂದಲೇ ಒಟ್ಟು ಶೇ.41ರಷ್ಟು ಪ್ರಮಾಣದಲ್ಲಿ ಪೆರಷಬಲ್‌ ಸರಕನ್ನು ರಫ್ತು ಮಾಡಲಾಗಿದೆ. ಅದರಲ್ಲಿ 36, 493 ಮೆಟ್ರಿಕ್‌ ಟನ್‌ ಪೌಲ್ಟ್ರಿ ಹಾಗೂ 1,952 ಮೆಟ್ರಿಕ್‌ ಟನ್‌ ಹೂಗಳನ್ನು ರಫ್ತು ಮಾಡಲಾಗಿದೆ ಎಂದು ಬಿಐಎಎಲ್‌ನ ಮೂಖ್ಯ ಡೆವಲಪರ್‌ ಆಫೀಸರ್‌ ಸತ್ಯಕಿ ರಘುನಾಥ್‌ ತಿಳಿಸಿದ್ದಾರೆ.

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ಇನ್ನಷ್ಟು ಸುಲಭಗೊಳಿಸಲು ಏರ್‌ಪೋರ್ಟ್‌ ಕಾರ್ಗೋ ಕಮ್ಯುನಿಟಿ ಸಿಸ್ಟಂ (ಎಸಿಎಸ್‌)ನನ್ನು ಅಳವಡಿಸಿದ್ದು, ಇದು ಸರಕು ಪತ್ತೆ ಮಾಡಲು ಸಹಾಯ ಮಾಡಲಿದ್ದು, ಅನವಶ್ಯಕ ಚೆಕ್ಕಿಂಗ್‌ ಇರುವುದಿಲ್ಲ.

ಕೃಷಿ ಸಂಸ್ಕೃರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ಇಂಡಿಯನ್‌ ಕಸ್ಟಮ್ಸ್‌, ಪ್ಲಾಂಟ್‌ ಕ್ವಾರಂಟೈನ್‌ ಆಫೀಸ್‌ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ಇಂದು ಬಿಐಎಎಲ್‌ ಸರಕು ಸಾಗಣೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಶ್ಲಾಘಿಸಿದರು.

ಎಪಿಇಡಿಎ ಅಧ್ಯಕ್ಷ ಡಾ.ಎಂ. ಅಂಗಮುತ್ತು ಮಾತನಾಡಿ, ಈ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳ ಸಾಗಣೆ ದೊಡ್ಡಮಟ್ಟದಲ್ಲಿ ಸಾಧನೆ ಮಾಡಿರುವುದು ದೇಶಕ್ಕೆ ಕೀರ್ತಿ ತಂದಿದೆ. ಪ್ರಸ್ತುತ ಬಿಐಎಎಲ್‌ನಲ್ಲಿ 60 ಸಾವಿರ ಎಂಟಿ ಸಾಮರ್ಥ್ಯದ ಶೀತಲ ಸರಕು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಇಂಗಿತ ಹೊಂದಿದ್ದೇವೆ ಎಂದರು.

ಇದನ್ನೂ ಓದಿ:ಸಂಪೂರ್ಣ ಎಲೆಕ್ಟ್ರಿಕ್ ವಿಮಾನದ ಪ್ರೊಟೊಟೈಪ್ ಪ್ರಥಮ ಹಾರಾಟ ಯಶಸ್ವಿ

ABOUT THE AUTHOR

...view details