ಕರ್ನಾಟಕ

karnataka

ETV Bharat / state

ಆನೇಕಲ್​​ನಲ್ಲಿ ಮಹಿಳೆ ಮೇಲೆ ಕರಡಿ ದಾಳಿ ಯತ್ನ: ಪ್ರಾದೇಶಿಕ ಅರಣ್ಯ ವಿಭಾಗದಿಂದ ಶೋಧ ಕಾರ್ಯ - ಕರಡಿ ದಾಳಿ

ಕಳೆದ ಎರಡು ದಿನಗಳ ಹಿಂದೆ ಕರಡಿ ಹೆನ್ನಾಗರ, ಕಾಚನಾಯಕನಹಳ್ಳಿ ಮತ್ತು ಶೆಟ್ಟಿಹಳ್ಳಿಯ ಐವರ ಮೇಲೆ ದಾಳಿ ಮಾಡಿತ್ತು. ಇದೀಗ ಬೇಗೂರು ಬಳಿ ಮಹಿಳೆ ಮೇಲೆ ದಾಳಿ ನಡೆಸಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

Bear Attack on women
ಕರಡಿ ದಾಳಿ ಯತ್ನ: ಪ್ರಾದೇಶಿಕ ಅರಣ್ಯ ವಿಭಾಗದಿಂದ ಶೋಧ ಕಾರ್ಯ

By

Published : Apr 1, 2021, 10:52 AM IST

ಆನೇಕಲ್: ಬೆಂಗಳೂರು - ಬೇಗೂರಿನ ವಿಶ್ವ ಪ್ರಿಯ ಬಡಾವಣೆಯಯಲ್ಲಿ ಕರಡಿ ದಾಳಿ ಮುಂದುವರೆದಿದ್ದು, ಮುಂಜಾನೆ ಹಾಲು ಕರೆಯಲು ಈಚೆಗೆ ಬಂದಿದ್ದ ವೇಳೆ ಮಹಿಳೆ ಮೇಲೆ ಕರಡಿ ದಾಳಿ ನಡೆಸಲು ಯತ್ನಿಸಿದೆ ಎನ್ನಲಾಗಿದೆ.

ಮಹಿಳೆ ಮೇಲೆ ಕರಡಿ ದಾಳಿ ಯತ್ನ: ಪ್ರಾದೇಶಿಕ ಅರಣ್ಯ ವಿಭಾಗದಿಂದ ಶೋಧ ಕಾರ್ಯ

ಕಳೆದ ಭಾನುವಾರ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ತಪ್ಪಿಸಿಕೊಂಡಿದ್ದ ಕರಡಿ ಇದಾಗಿದೆ ಎಂದು ಶಂಕಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಹೆನ್ನಾಗರ, ಕಾಚನಾಯಕನಹಳ್ಳಿ ಮತ್ತು ಶೆಟ್ಟಿಹಳ್ಳಿಯ ಐವರ ಮೇಲೆ ದಾಳಿ ಮಾಡಿತ್ತು. ಇದೀಗ ಬೇಗೂರು ಬಳಿ ಮಹಿಳೆ ಮೇಲೆ ದಾಳಿ ನಡೆಸಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಓದಿ:ಗ್ರಾಮಕ್ಕೆ ನುಗ್ಗಿ ಜನರ ಮೇಲೆ ಕರಡಿ ದಾಳಿ: ಹಲವರಿಗೆ ಗಾಯ

ಸದ್ಯ ಕರಡಿಗಾಗಿ ಕೆಆರ್​ಪುರಂ ಪ್ರಾದೇಶಿಕ ಅರಣ್ಯ ವಿಭಾಗದಿಂದ ಶೋಧ ಕಾರ್ಯ ಮುಂದುವರೆದಿದೆ.

ABOUT THE AUTHOR

...view details