ಬೆಂಗಳೂರು: ಐತಿಹಾಸಿಕ ತಾಣಗಳು ಅನೈತಿಕ ಚಟುವಟಿಕೆಗಳ ಗೂಡಾಗುತ್ತಿವೆ. ಅವುಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ರಕ್ಷಿಸಲು ಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸ್ಥೂಲಭದ್ರ ದೇವಸ್ಥಾನದ ಶಾಲಾ ಕಟ್ಟಡದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸ್ಕಾರ ಪ್ರಧಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಶಾಲೆ ಆರಂಭವಾಗಲಿದೆ. ಪ್ರವಾಸ ಸ್ಥಳಗಳ ಅಧ್ಯಯನ ನಡೆಸಿ ಉತ್ತಮ ಪಡಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಸಾಮಾನ್ಯ ಜನರಲ್ಲಿ ಐತಿಹಾಸಿಕ ಸ್ಥಳಗಳ ಬಗ್ಗೆ ಅಸಡ್ಡೆ ಇರುವುದರಿಂದ ಟಿಪ್ಪು ಕೋಟೆಯನ್ನು ಅನೈತಿಕ ತಾಣ ಮಾಡಲಾಗಿದೆ. ಅವುಗಳು ಸಾರ್ವಜನಿಕರ ಸ್ವತ್ತು ಎಂದು ಮಾರ್ಪಡಿಸಿದರೆ ಅಭಿವೃದ್ಧಿ ಹೊಂದುತ್ತವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.