ದೊಡ್ಡಬಳ್ಳಾಪುರ : ವಿಕೇಂಡ್ ಪಾರ್ಟಿ ಮುಗಿಸ್ಕೊಂಡ್ ಮನೆಗೆ ಬರುವಾಗ ರಸ್ತೆ ಬದಿಯ ನಾಮಫಲಕ್ಕೆ ಗುದ್ದಿದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಾರ್ಟಿ ಜೋಶ್ನಲ್ಲಿ ರಸ್ತೆಬದಿಯ ನಾಮಫಲಕಕ್ಕೆ ಗುದ್ದಿದ ಬೈಕ್ ಸವಾರ ಸ್ಥಳದಲ್ಲೇ ಸಾವು
ಬೈಕ್ಗೆ ಗುದ್ದಿದ ರಭಸಕ್ಕೆ ನಾಮಫಲಕ ಮುರಿದು ಬಿದ್ದಿದೆ. ತೀವ್ರ ಸ್ವರೂಪದಲ್ಲಿ ಗಾಯಾಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸವಾರ .
ಬೆಂಗಳೂರಿನ ಹೊರವಲಯದ ರಾಜನುಕುಂಟೆಯ ಇಟಗಲ್ ಪುರದಲ್ಲಿ ಅಪಘಾತ ನಡೆದಿದೆ. ಅಪಘಾತದಲ್ಲಿ ಮಂಜುನಾಥ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಿನ್ನೆ ವಿಕೇಂಡ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮಂಜುನಾಥ್ ಪಾರ್ಟಿ ಮುಗಿಸ್ಕೊಂಡ್ ಬೈಕ್ ನಲ್ಲಿ ಮನೆಗೆ ಬರುವಾಗ ರಸ್ತೆ ಬದಿಯ ನಾಮಫಲಕಕ್ಕೆ ಗುದ್ದಿದ್ದಾನೆ.
ಬೈಕ್ ಗುದ್ದಿದ ರಭಸಕ್ಕೆ ನಾಮಫಲಕ ಮುರಿದು ಬಿದ್ದಿದೆ, ತೀವ್ರ ಸ್ವರೂಪದಲ್ಲಿ ಗಾಯಾಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಜನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.