ಕರ್ನಾಟಕ

karnataka

By

Published : Mar 4, 2020, 1:24 PM IST

ETV Bharat / state

ಕೊರೊನಾ ವೈರಸ್ ಭೀತಿ: ಕೆಂಪೇಗೌಡ ಏರ್​​ಪೋರ್ಟ್​​ನಲ್ಲಿ 40,207 ಪ್ರಯಾಣಿಕರ ತಪಾಸಣೆ

ಪ್ರಪಂಚದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಭೀತಿ ಬೆಂಗಳೂರನ್ನು ಕಾಡುತ್ತಿದೆ. ಹೈದರಾಬಾದ್ ಟೆಕ್ಕಿಯಲ್ಲಿ ಕೊರೊನಾ ವೈರಸ್ ಸೊಂಕು ಕಾಣಿಸಿಕೊಂಡಿದ್ದು ಆತ ಬೆಂಗಳೂರಿನ ಪಿಜಿಯಲ್ಲಿ ಇದ್ದನೆಂಬ ಕಾರಣಕ್ಕೆ ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ವೈರಸ್ ಭೀತಿ ಎದುರಾಗಿದೆ.

40207 passangers tested for Corona virus in Bangalore
ಬೆಮಗಳೂರಿನಲ್ಲಿ ಕೊರೊನಾ ವೈರಸ್

ದೇವನಹಳ್ಳಿ (ಬೆಂಗಳೂರು): ಪ್ರಪಂಚದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಭೀತಿ ಬೆಂಗಳೂರನ್ನು ಕಾಡುತ್ತಿದೆ. ಹೈದರಾಬಾದ್ ಟೆಕ್ಕಿಯಲ್ಲಿ ಕೊರೊನಾ ವೈರಸ್ ಸೊಂಕು ಕಾಣಿಸಿಕೊಂಡಿದ್ದು ಆತ ಬೆಂಗಳೂರಿನ ಪಿಜಿಯಲ್ಲಿ ಇದ್ದನೆಂಬ ಕಾರಣಕ್ಕೆ ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ವೈರಸ್ ಭೀತಿ ಎದುರಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದುವರೆಗೆ 40,207 ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನರ್ ಪರೀಕ್ಷೆಗೆ ಒಳಪಡಿಸಲಾಗಿದೆ. 251 ಜನರ ರಕ್ತ ಪರೀಕ್ಷೆ ನಡೆಸಲಾಗಿದ್ದು, 238 ನೆಗೆಟಿವ್ ಎಂದು ವರದಿ ಬಂದಿದೆ. ಉಳಿದ 13 ಜನರ ವರದಿ ಇನ್ನಷ್ಟೇ ಬರಬೇಕಿದೆ.

ಕೆಐಎಎಲ್​ನಲ್ಲಿ 40,207 ಪ್ರಯಾಣಿಕರ ತಪಾಸಣೆ

ಹೈದರಾಬಾದ್​ನಲ್ಲಿ ಟೆಕ್ಕಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಗಡಿ ಭಾಗಗಳಾದ ಬೀದರ್, ಕಲಬುರಗಿ, ರಾಯಚೂರಿನಲ್ಲಿ ಜಾಗೃತಿ ಮೂಡಿಸುವ ಮಾಹಿತಿ ಫಲಕಗಳನ್ನ ಅಳವಡಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಯಾವುದೇ ಗಾಳಿಸುದ್ದಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸುವಂತೆ ಸರ್ಕಾರ ಜನರಿಗೆ ಮನವಿ ಮಾಡಿದೆ.

ABOUT THE AUTHOR

...view details