ಬಾಗಲಕೋಟೆ:ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಗಂಗೂಬಾಯಿ ಮೇಟಿ ಅವರು, ಜಿ.ಪಂ. ಸದಸ್ಯರಿಗೆ ಹಾಗೂ ಇತರ ಮಹಿಳೆಯರಿಗೆ ಅರಿಷಿಣ ಕುಂಕುಮ ಹಚ್ಚಿ ಹೂವು ಮೂಡಿಸಿದರು.
ಬಾಗಲಕೋಟೆ: ವಿಶೇಷವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ - ಬಾಗಲಕೋಟೆ
ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಮಹಿಳೆಯರೆಲ್ಲ ಸೇರಿಕೊಂಡು ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿದರು.
ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಆಯೋಜಿಸಿದ್ದ, ಕಾರ್ಯಕ್ರಮದಲ್ಲಿ ವೇದಿಕೆಯಿಂದ ಇಳಿದು ಬಂದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಂಗೂಬಾಯಿ(ಬಾಯಕ್ಕ) ಮೇಟಿಯವರು ವೇದಿಕೆ ಮುಂದೆ ಕುಳಿತಿದ್ದ ಮಹಿಳಾ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅರಿಷಿಣ, ಕುಂಕುಮ ಹಚ್ಚಿ ಹೂವು ನೀಡಿ ಪುಸ್ತಕವನ್ನು ಕಾಣಿಕೆ ನೀಡುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿದರು.
ಸಾಂಸೃತಿಕ ಕಾರ್ಯಕ್ರಮದಲ್ಲಿ ಶೋಭಾನ ಪದ, ಜಾನಪದ ಹಾಡುವ ಕಲಾವಿದರೊಂದಿಗೆ ಮಹಿಳೆಯರೆಲ್ಲಾ ದನಿಗೂಡಿಸಿದರು. ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯರ ಅವಧಿ ಮುಕ್ತಾಯ ಆಗುತ್ತಿರುವ ಹಿನ್ನೆಲೆ ತಮ್ಮ ಅಧಿಕಾರಾವಧಿಯ ಕೊನೆಯ ಕಾರ್ಯಕ್ರಮವೆಂದು ಅದ್ಧೂರಿಯಾಗಿ ಆಚರಿಸಲಾಯಿತು.