ಬಾಗಲಕೋಟೆ:ನೆರೆ ಹಾವಳಿಯಿಂದಾಗಿ ಆಸ್ತಿಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಮನನೊಂದುಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಾಮಥಾಳ ಗ್ರಾಮದಲ್ಲಿ ನಡೆದಿದೆ.
ರಾಮಥಾಳ ಗ್ರಾಮದ ರೇವಣವ್ವ ಮಲ್ಲೇಶಪ್ಪ ಯರನಾಳ (60) ಮೃತರು.
ಬಾಗಲಕೋಟೆ:ನೆರೆ ಹಾವಳಿಯಿಂದಾಗಿ ಆಸ್ತಿಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಮನನೊಂದುಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಾಮಥಾಳ ಗ್ರಾಮದಲ್ಲಿ ನಡೆದಿದೆ.
ರಾಮಥಾಳ ಗ್ರಾಮದ ರೇವಣವ್ವ ಮಲ್ಲೇಶಪ್ಪ ಯರನಾಳ (60) ಮೃತರು.
ಆ.13ರಂದು ಬೆಳಗ್ಗೆ 4 ಗಂಟೆಗೆ ಶೌಚಾಲಯಕ್ಕೆ ಹೋಗುವೆನೆಂದು ರಾಮಥಾಳ ಹಾಗೂ ಕಮತಗಿ ಮಧ್ಯ ಇರುವ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆಯಿಂದ ಜಿಗಿದ್ದಿದ್ದಾರೆ ಎನ್ನಲಾಗಿದೆ.
ಶೌಚಾಲಯಕ್ಕೆ ತೆರಳುವಾಗ ತೆಗೆದುಕೊಂಡು ಹೋದ ಬ್ಯಾಟರಿ, ಚಪ್ಪಲಿ ಸೇತುವೆ ಬಳಿ ದೊರೆತ್ತಿವೆ. ರೇವಣವ್ವ ಕಾಣೆಯಾದ ಕುರಿತು ಎರಡು ದಿನ ಕಾರ್ಯಾಚರಣೆ ಕೂಡಾ ನಡೆಸಲಾಗಿತ್ತು.
ಗುರುವಾರ ಇಂಗಳಗಿ ಹಾಗೂ ಬೇನಾಳ ಮಧ್ಯ ಇರುವ ಕಿರು ಸೇತುವೆ ಬಳಿಯ ಜಮೀನಿನಲ್ಲಿ ಸಿಕ್ಕಿದೆ. ಸ್ಥಳೀಯರು ಅಮೀನಗಡ ಠಾಣೆಗೆ ಮಾಹಿತಿ ನೀಡಿದ್ದು. ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.